ETV Bharat / city

ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ : ಮತಗಟ್ಟೆ ಸ್ಥಾಪಿಸಿದ ಸರ್ಕಾರಿ ಕಚೇರಿಗಳಿಗೆ 2 ದಿನ ರಜೆ ಘೋಷಣೆ - ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ

ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಕೇಂದ್ರ ಸ್ಥಾಪಿಸಿದ ಸರ್ಕಾರಿ ಕಚೇರಿಗಳು ಹಾಗೂ ಸರ್ಕಾರಿ ಶಾಲೆಗಳಿಗೆ ಏ. 26ರಂದು ಚುನಾವಣೆಯ ಪೂರ್ವ ತಯಾರಿಗಾಗಿ ಮತ್ತು ಏ. 27ರಂದು ಮತದಾನಕ್ಕಾಗಿ ರಜೆ ಘೋಷಿಸಲಾಗಿದೆ.

bellary
ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ
author img

By

Published : Apr 24, 2021, 11:49 AM IST

ಬಳ್ಳಾರಿ: ಏಪ್ರಿಲ್​ 27ರಂದು ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹೀಗಾಗಿ, ಮತದಾನ ಕೇಂದ್ರ ಸ್ಥಾಪಿಸಿದ ಸರ್ಕಾರಿ, ಅನುದಾನಿತ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ ಏ. 26ರಂದು ಚುನಾವಣೆಯ ಪೂರ್ವ ತಯಾರಿಗಾಗಿ ಮತ್ತು ಏ. 27ರಂದು ಮತದಾನಕ್ಕಾಗಿ ರಜೆ ಘೋಷಿಸಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.

ಬಳ್ಳಾರಿ ಮಹಾನಗರಪಾಲಿಕೆ ನಗರ ಸ್ಥಳೀಯ ಸಂಸ್ಥೆಯ ಸಾರ್ವತ್ರಿಕ ಚುನಾವಣೆಯು ಏ. 27ರಂದು ಜರುಗಲಿದೆ. ಸದರಿ ಮಹಾನಗರಪಾಲಿಕೆ ವ್ಯಾಪ್ತಿಗೆ ಒಟ್ಟು 338 ಮತಗಟ್ಟೆಗಳು ಬರುತ್ತವೆ. ಎಲ್ಲಾ ಮತಗಟ್ಟೆ ಸಿಬ್ಬಂದಿ ಏ.26ರಂದು ಡಿಮಸ್ಟರಿಂಗ್ ಸ್ಥಳದಿಂದ ಸಂಬಂಧಪಟ್ಟ ಮತಗಟ್ಟೆಗಳಿಗೆ ತೆರಳಲಿದ್ದಾರೆ.

ಆದ್ದರಿಂದ ಮತಗಟ್ಟೆಗಳನ್ನು ಸರ್ಕಾರಿ ಕಚೇರಿಗಳು ಹಾಗೂ ಸರ್ಕಾರಿ ಶಾಲೆಗಳಲ್ಲಿ ಸ್ಥಾಪಿಸಿದಲ್ಲಿ ಅವುಗಳಿಗೆ ಏ.26ರಂದು ಸೋಮವಾರ ಪೂರ್ವ ತಯಾರಿಗಾಗಿ ಹಾಗೂ ಏ.27 ರಂದು ಮತದಾನಕ್ಕಾಗಿ ರಜೆ ಘೋಷಿಸುವುದು ಅವಶ್ಯಕತೆ ಇರುವುದರಿಂದ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಓದಿ: ಸಿಬ್ಬಂದಿ ಕೊರತೆ, ಸಿಟಿ ಸ್ಕ್ಯಾನಿಂಗ್ ಸೆಂಟರ್ ಬಂದ್.. ಜಿಮ್ಸ್​ನಲ್ಲಿ​ ಕೋವಿಡ್ ರೋಗಿಗಳಿಗೆ ಸಂಬಂಧಿಕರೇ ಗತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.