ಬಳ್ಳಾರಿ: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಾನಗರ ಪಾಲಿಕೆ ಮತ ಎಣಿಕೆ ಶುರುವಾಗಿದ್ದು, ಬೆಳಗ್ಗೆ 7.45 ನಿಮಿಷಕ್ಕೆ ಸ್ಟ್ರಾಂಗ್ ರೂಮ್ ತೆರೆಯಲಾಯಿತು.
ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಎಎಸ್ಪಿ ಬಿ.ಎನ್.ಲಾವಣ್ಯ, ಎಸಿ ರಮೇಶ ಕೋನರೆಡ್ಡಿ ಹಾಗೂ ಮಹಾನಗರ ಪಾಲಿಕೆ ಅಭ್ಯರ್ಥಿಗಳ ಸಮಕ್ಷಮದಲಿ ಸ್ಟ್ರಾಂಗ್ ರೂಮ್ ತೆರೆಯಲಾಯಿತು. ಮೂರ್ನಾಲ್ಕು ಕೊಠಡಿಗಳಲ್ಲಿ ಈ ಮತ ಯಂತ್ರೋಪಕರಣಗಳನ್ನ ಇಡಲಾಗಿದ್ದು, ಸ್ಟ್ರಾಂಗ್ ರೂಮ್ ಓಪನ್ ಆದ ಬಳಿಕ ಮತ ಎಣಿಕೆ ಕಾರ್ಯಾರಂಭ ನಡೆಯುತ್ತಿದೆ. ಸ್ಟ್ರಾಂಗ್ ರೂಮ್ ತೆರೆಯುವ ವೇಳೆ ಅಧಿಕಾರಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಗುಂಪುಗೂಡಿದ್ದರು.
ಬಳ್ಳಾರಿಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 39 ವಾರ್ಡ್ಗಳಿದ್ದು, 187 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರ ಪುತ್ರ ಗಾಲಿ ಶ್ರವಣಕುಮಾರ್ ರೆಡ್ಡಿ ಸೇರಿದಂತೆ ಎಲ್ಲ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಓದಿ: ಇಂದು ಬಳ್ಳಾರಿ ಮಹಾನಗರ ಪಾಲಿಕೆ ಫಲಿತಾಂಶ; ಸಂಭ್ರಮಾಚರಣೆಗಿಲ್ಲ ಅವಕಾಶ