ಬಳ್ಳಾರಿ: ವಿಶ್ವ ಪಾರಂಪರಿಕ ತಾಣವಾದ ಹಂಪಿಯಲ್ಲಿ ಇನ್ಮುಂದೆ ಬ್ಯಾಟರಿ ಚಾಲಿತ ರೈಲು ಸಂಚಾರ ಶುರುವಾಗಲಿದ್ದು, ಮುಂದಿನ ಮಾರ್ಚ್ ತಿಂಗಳೊಳಗೆ ಈ ಸೇವೆ ಸಿಗಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಎರಡು ಬ್ಯಾಟರಿ ಚಾಲಿತ ವಾಹನಗಳು ಸೇರಿದಂತೆ ಒಂದು ಬ್ಯಾಟರಿ ಚಾಲಿತ ರೈಲು ಗಾಡಿಯನ್ನು ಓಡಿಸಲು ಚಿಂತನೆ ನಡೆಸಲಾಗಿದೆ. ಹಂಪಿ ತುಂಬಾ ದೊಡ್ಡ ಪ್ರದೇಶವಾಗಿರುವುದರಿಂದ ಇದು ಅವಶ್ಯಕವಾಗಿದೆ ಎಂದರು.
ಇಡೀ ದಿನ ಹಂಪಿಯನ್ನು ವೀಕ್ಷಣೆ ಮಾಡಲು ನಿರ್ದಿಷ್ಟ ದರವನ್ನು ನಿಗದಿ ಮಾಡಲಾಗುವುದು. ಪ್ರವಾಸಿಗರು ಎಲ್ಲಿ ಬೇಕಾದರೂ ಹತ್ತಿ ಇಳಿಯಬಹುದು. ಅಂದಾಜು 21ಕ್ಕೂ ಅಧಿಕ ಸಾಮರ್ಥ್ಯದ ಸೀಟ್ಗಳನ್ನು ಹೊಂದಿದ್ದು, ಇವು ಸುಸಜ್ಜಿತ ವಾಹನಗಳಾಗಿವೆ ಎಂದು ತಿಳಿಸಿದರು.