ಬಳ್ಳಾರಿ: ನಗರದ ಕೌಲ್ ಬಜಾರ್ ಠಾಣೆಯ ಪೊಲೀಸರು ಮನೆ ಕಳ್ಳತನ ಪ್ರಕರಣದಲ್ಲಿ ಆರೋಪಿ ಬಂಧಿಸಿ, 48,750 ರೂ. ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿಯ ವಿದ್ಯಾನಗರದ ರಾಘವ ಕಲ್ಯಾಣ ಕಾಲೊನಿಯಲ್ಲಿ ನಾಲ್ಕು ದಿನಗಳ ಹಿಂದೆ ಕಳ್ಳತನ ನಡೆದಿದ್ದು, ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳತನನಾದ ನಾಲ್ಕು ದಿನಕ್ಕೆ ಠಾಣೆಯ ಪೋಲಿಸ್ ಇನ್ಸ್‌ಪೆಕ್ಟರ್ ಚಂದನ್ ಗೋಪಾಲ ನೇತೃತ್ವದಲ್ಲಿ, ಆರೋಪಿ ಹೆಚ್. ಹನುಮಂತ್ ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದ.
ಪೋಲಿಸರು ಆರೋಪಿ ಬಳಿ ಇದ್ದ 48,750 ರೂಪಾಯಿಗಳಷ್ಟು ಬೆಲೆ ಬಾಳುವ 23 ಗ್ರಾಂ ತೂಕದ ಬಂಗಾರದ ಆಭರಣ, 15 ಗ್ರಾಂ ತೂಕದ ಬೆಳ್ಳಿಯ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕೌಲ್ ಬಜಾರ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಚಂದನ್ ಗೋಪಾಲ ನೇತೃತ್ವದಲ್ಲಿ ಅಪರಾಧ ವಿಭಾಗದ ಪಿ.ಎಸ್.ಐ ಹೆಚ್.ಬಿ ವಿಜಯಲಕ್ಷ್ಮಿ, ಎ.ಎಸ್.ಐ ಲಾರೆನ್ಸ್, ಪೊಲೀಸ್ ಸಿಬ್ಬಂದಿಗಳಾದ ನಾಗರಾಜ್, ಅನ್ವರ್ ಭಾಷಾ, ರಾಮ್ ದಾಸ್, ಸೋಮಪ್ಪ, ರಾಮಲಿಂಗಪ್ಪ, ಬಿ.ಸಿದ್ದೇಶ್, ರಾಜ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ರು ಎಂದು ಗೊತ್ತಾಗಿದೆ.