ETV Bharat / city

ಹೊಸಪೇಟೆಯಲ್ಲಿ ವೃದ್ಧೆಯ ಬರ್ಬರ ಕೊಲೆ.. ಸೀರೆ ಖರೀದಿ ಸೋಗಿನಲ್ಲಿ ಬಂದ ಆಗಂತುಕರಿಂದ ದುಷ್ಕೃತ್ಯ - an old woman murdered by robbery gang in hospete,

ಭುವನೇಶ್ವರಿ ಹಾಗೂ ಶಿವಭೂಷಮ್ಮ ಎನ್ನುವವರು ನಗರದ ರಾಣಿಪೇಟೆಯ ತಮ್ಮ ಮನೆಯಲ್ಲೇ ಸೀರೆ ವ್ಯಾಪಾರ ಮಾಡುತ್ತಿದ್ದರು. ಸೀರೆ ಕೊಳ್ಳುವ ನೆಪದಲ್ಲಿ ಬಂದ ದರೋಡೆಕೋರರ ತಂಡವು ಕೈ-ಕಾಲು ಕಟ್ಟಿ ಹಾಕಿ ಹೊಡೆದ ಹೊಡೆತಕ್ಕೆ ವೃದ್ಧೆ ಭುವನೇಶ್ವರಿ ಮೃತಪಟ್ಟಿದ್ದಾರೆ. ಶಿವಭೂಷಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ.

hosapete bhuvaneshwari murder case
ಹೊಸಪೇಟೆ ಭುವನೇಶ್ವರಿ ಕೊಲೆ ಪ್ರಕರಣ
author img

By

Published : Oct 23, 2021, 6:43 AM IST

Updated : Oct 23, 2021, 7:32 AM IST

ಹೊಸಪೇಟೆ(ವಿಜಯನಗರ): ಸೀರೆ ಖರೀದಿಸುವ ಸೋಗಿನಲ್ಲಿ ಬಂದ ದರೋಡೆಕೋರರು ವೃದ್ಧೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ರಾಣಿಪೇಟೆಯಲ್ಲಿ ನಿನ್ನೆ(ಶುಕ್ರವಾರ) ರಾತ್ರಿ ನಡೆದಿದೆ. ಭುವನೇಶ್ವರಿ (68) ಕೊಲೆಯಾದ ವೃದ್ಧೆ. ಇನ್ನೋರ್ವ ಮಹಿಳೆ ಶಿವಭೂಷಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ.

ದರೋಡೆ ಮಾಡಲು ಬಂದ ತಂಡ, ಕೈ-ಕಾಲು ಕಟ್ಟಿ ಹಾಕಿ ಹೊಡೆದ ಹೊಡೆತಕ್ಕೆ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.‌ ಭುವನೇಶ್ವರಿ ಹಾಗೂ ಶಿವಭೂಷಮ್ಮ ನಗರದ ರಾಣಿಪೇಟೆಯ ತಮ್ಮ ಮನೆಯಲ್ಲೇ ಸೀರೆ ವ್ಯಾಪಾರ ಮಾಡುತ್ತಿದ್ದರು. ಸೀರೆ ಕೊಳ್ಳುವ ಸೋಗಿನಲ್ಲಿ ಬಂದ ದರೋಡೆಕೋರರು ದುಷ್ಕೃತ್ಯ ಎಸಗಿದ್ದಾರೆ. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸಪೇಟೆ ಭುವನೇಶ್ವರಿ ಕೊಲೆ ಪ್ರಕರಣ......

ಇದನ್ನೂ ಓದಿ: 8 ಗೋವುಗಳ ರಕ್ಷಿಸಿದ ಹಿಂದೂ ಕಾರ್ಯಕರ್ತರು, ಪೊಲೀಸರಿಗೆ ಹಸ್ತಾಂತರ: ಐವರು ಆರೋಪಿಗಳ ಬಂಧನ

ಘಟನೆ ನಡೆದ ಸ್ಥಳಕ್ಕೆ ವಿಜಯನಗರ ಎಸ್ಪಿ ಡಾ. ಅರುಣ್ ಕೆ. ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಸೀರೆ ಖರೀದಿಯ ನೆಪದಲ್ಲಿ ಆರು ಜನರು ದರೋಡೆ ಮಾಡಲು ಬಂದಿದ್ದಾರೆ. ಘಟನೆಯಲ್ಲಿ ವೃದ್ಧೆ ಭುವನೇಶ್ವರಿ ಕೊಲೆಯಾಗಿದ್ದಾರೆ. ಇನ್ನೊಬ್ಬರು ಗಾಯಗೊಂಡಿದ್ದಾರೆ. ‌ದರೋಡೆಯಲ್ಲಿ 6 ಜನರು ಇರುವ ಮಾಹಿತಿ ಸಿಕ್ಕಿದೆ. ತನಿಖೆಯ ಬಳಿಕ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಹೇಳಿದರು.

Last Updated : Oct 23, 2021, 7:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.