ಹೊಸಪೇಟೆ : ಡಾ.ಬಿ.ಆರ್.ಅಂಬೇಡ್ಕರ್ ತಳಮಟ್ಟದ ಸಮುದಾಯಕ್ಕೆ ಮತ್ತು ಮಹಿಳೆಯರಿಗೆ ಸಮಾನತೆ ಒದಗಿಸಿಕೊಟ್ಟಿದ್ದಾರೆ. ಶಿಕ್ಷಣದ ಸಂಘಟಣೆಯ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಶಿಕ್ಷಣವು ಎಲ್ಲ ಜನಾಂಗದವರಿಗೂ ಸಿಗಬೇಕು ಎಂಬುದೇ ಅವರ ಗುರಿಯಾಗಿತ್ತು ಎಂದು ಹಂಪಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ಸ. ಚಿ. ರಮೇಶ ಅಭಿಪ್ರಾಯಪಟ್ಟರು.
ಹಂಪಿ ವಿಶ್ವ ವಿದ್ಯಾಲಯದಲ್ಲಿಂದು ನಡೆದ ಡಾ. ಬಿ. ಆರ್. ಅಂಬೇಡ್ಕರ್ ಅವರ 63 ನೇ ಮಹಾಪರಿನಿರ್ವಾಣ ದಿನದ ಆಚರಣೆಯನ್ನುದ್ದೇಶಿಸಿ ಕುಲಪತಿ ಡಾ. ಸ. ಚಿ. ರಮೇಶ ಅವರು ಮಾತನಾಡಿ, ಅಂಬೇಡ್ಕರ್ ಅವರು ಮಾನವನ ಜೀವನದಲ್ಲಿ ಶಿಕ್ಷಣ ಅತ್ಯಂತ ಮುಖ್ಯವಾದದ್ದು, ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅವಶ್ಯಕ ಎಂದು ಶಿಕ್ಷಣದ ಮಹತ್ವವನ್ನು ಸಾರಿ ಹೇಳಿದ್ದರು. ದೇಶ ವಿದೇಶದಲ್ಲಿ ಅಧ್ಯಯನ ಮಾಡಿ ಭಾರತಕ್ಕೆ ಉತ್ತಮ ಸಂವಿಧಾನ ತಂದು ಕೊಟ್ಟ ಮಹಾನ್ ಸಾಧಕ ಅವರು. ಸ್ವಾಭಿಮಾನದಿಂದ ಜೀವನವನ್ನು ಕಟ್ಟಿಕೊಳ್ಳಿ, ಗುಲಾಮಗಿರಿಯ ಬಂಧನದಿಂದ ಹೊರ ಬನ್ನಿ ಎಂದು ಕರೆ ಕೊಟ್ಟು ದಲಿತರ ಬದುಕಿಗೆ ಹೊಸ ಅರ್ಥವನ್ನು ತಂದು ಕೊಟ್ಟಿದ್ದಾರೆ ಎಂದು ಗುಣಗಾನ ಮಾಡಿದ್ರು.
ದಿನಗೂಲಿಯ ನೌಕರರಿಗೆ ಸಮಯದ ಮಿತಿ ಮಾಡಿದ್ದಾರೆ. ಅವರ ಕೊಡುಗೆ ದೇಶಕ್ಕೆ ಅಗ್ರಗಣ್ಯವಾಗಿದೆ. ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು. ಹಕ್ಕು ಮತ್ತು ಕರ್ತವ್ಯಗಳನ್ನು ಪಡದುಕೊಳ್ಳಬೇಕು. ಜೊತೆಗೆ ನಾವು ನಮ್ಮ ಕರ್ತವ್ಯಗಳನ್ನು ಮಾಡಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಎಲ್ಲರೂ ಬಾಬ ಸಾಹೇಬ್ ಅವರ ಮಾರ್ಗದರ್ಶನದಲ್ಲಿ ನಡಿಯೋಣ ಎಂದು ಕರೆ ನೀಡಿದರು.