ಬಳ್ಳಾರಿ: ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಗೋಡೆ ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಮತ್ತಿಬ್ಬರು ಕಾರ್ಮಿಕರು ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಮೃತರನ್ನು ಕೌಲ್ ಬಜಾರ್ ಮೂಲದ ಸುಂಕಪ್ಪಾ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಇಬ್ಬರು ಕಾರ್ಮಿಕರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.
ಓದಿ: ಮದುವೆ ಸಮಾರಂಭದ ವೇಳೆ ಕುಸಿದು ಬಿದ್ದ ಮನೆಯ ಬಾಲ್ಕನಿ: 20ಕ್ಕೂ ಅಧಿಕ ಮಂದಿಗೆ ಗಾಯ- VIDEO
ನಗರದ ವಾಸವಿ ಶಾಲೆಯ ಹಿಂಭಾಗದಲ್ಲಿರುವ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಗೋಡೆ ಏಕಾಏಕಿ ಕುಸಿದಿದೆ. ಈ ವೇಳೆ, ಸುಂಕಪ್ಪಾ ಮೃತಪಟ್ಟಿದ್ದಾರೆ. ಅವಶೇಷಗಳು ಅಡಿ ಸಿಲಿಕಿದ್ದು ಇಬ್ಬರು ಕಾರ್ಮಿಕರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.