ಬೆಳಗಾವಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮಾಡಿದ್ದೇ ತಪ್ಪು. ವಿಪಕ್ಷದಲ್ಲಿದ್ದಿದ್ದರೆ ನಾವೆಲ್ಲ ಸಂತೋಷದಿಂದ ಇರುತ್ತಿದ್ದವು. ಸಮಸ್ಯೆ ಪರಿಹರಿಸಲು ಯಾರೂ ಮುಂದಾಗಲಿಲ್ಲ. ವೇಣುಗೋಪಾಲ್ನಂತಹ ಬೇಕಾರ್ ಮನುಷ್ಯ ಯಾರೂ ಇಲ್ಲ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ವೇಣುಗೋಪಾಲ್ ಬದಲಿಗೆ ಮಾಣಿಕ್ಯ ಠಾಕೂರ್ ಕೈಯಲ್ಲಿ ಉಸ್ತುವಾರಿ ನೀಡಿದ್ದಿದ್ರೆ ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದರು. ವೇಣುಗೋಪಾಲ್ನಿಂದ ಎಲ್ಲವೂ ಹಾಳಾಗಿದೆ. ಕಾಂಗ್ರೆಸ್ ಈ ಸ್ಥಿತಿಗೆ ಬಂದಿರುವುದು ದುರ್ದೈವದ ಸಂಗತಿ. ಕಾಂಗ್ರೆಸ್ ಹೈಕಮಾಂಡ್ ದಿಟ್ಟ ಕ್ರಮ ಕೈಗೊಂಡರೆ ಕಾಂಗ್ರೆಸ್ ಉಳಿಯುತ್ತದೆ ಎಂದರು.
ಕಾಂಗ್ರೆಸ್ 70ರ ದಶಕದ ರಾಜಕಾರಣ ಮಾಡುತ್ತಿದೆ. ಈಗ ಕಾಲ ಬದಲಾಗಿದ್ದು, ಜನರು ತಿರಸ್ಕಾರ ಮಾಡುತ್ತಾರೆ. ಕಾಂಗ್ರೆಸ್ ಹೈಕಮಾಂಡ್ ದಿಟ್ಟ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದು, ಇದು ಪಕ್ಷಕ್ಕೆ ಹಾನಿ ಎಂದು ರಮೇಶ್ ಜಾರಕಿಹೊಳಿ ಹೇಳಿದರು.