ETV Bharat / city

ಉಕ್ರೇನಿನಲ್ಲಿ ಬೆಳಗಾವಿ ವಿದ್ಯಾರ್ಥಿಗಳ ರಕ್ಷಣೆಗೆ ಇಬ್ಬರು ನೋಡಲ್ ಅಧಿಕಾರಿಗಳ ನೇಮಕ ; ಸಚಿವ ಕಾರಜೋಳ

author img

By

Published : Feb 28, 2022, 12:09 PM IST

ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರು ಆತಂಕಕ್ಕೆ ಒಳಗಾಗಬೇಕಿಲ್ಲ. ಪ್ರಧಾನಿ ಮೋದಿಯವರು ಸತತವಾಗಿ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಸುರಕ್ಷಿತವಾಗಿ ನಮ್ಮ ರಾಜ್ಯಕ್ಕೆ ಅವರನ್ನು ಕರೆತರಲು ಪ್ರಯತ್ನ ನಡೆಯುತ್ತಿದೆ..

two-nodle-officers-appointed-to-bring-back-the-students-from-ukrein
ಸಚಿವ ಕಾರಜೋಳ

ಬೆಳಗಾವಿ : ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಜಿಲ್ಲೆಯ ವಿದ್ಯಾರ್ಥಿಗಳ ರಕ್ಷಣೆಗೆ ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಎಂಡಿ ಪ್ರವೀಣ್ ಬಾಗೇವಾಡಿ, ಬೆಳಗಾವಿ ಎಸಿ ರವಿ ಕರಲಿಂಗಣ್ಣವರ್ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಇಬ್ಬರು ನೋಡಲ್ ಅಧಿಕಾರಿಗಳನ್ನು ಮುಂಬೈಗೆ ಕಳುಹಿಸಿಕೊಟ್ಟಿದ್ದು, ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರು ಆತಂಕಕ್ಕೆ ಒಳಗಾಗಬೇಕಿಲ್ಲ. ಪ್ರಧಾನಿ ಮೋದಿಯವರು ಸತತವಾಗಿ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಸುರಕ್ಷಿತವಾಗಿ ನಮ್ಮ ರಾಜ್ಯಕ್ಕೆ ಅವರನ್ನು ಕರೆತರಲು ಪ್ರಯತ್ನ ನಡೆಯುತ್ತಿದೆ.

ಈಗಾಗಲೇ ಹಲವು ವಿದ್ಯಾರ್ಥಿಗಳು ಆಯಾ ರಾಜ್ಯಗಳಿಗೆ ಸೇರಿದ್ದಾರೆ. ಉಕ್ರೇನ್‌ನಲ್ಲಿ ಕೆಲವರಿಗೆ ನೀರು, ಊಟದ ಸಮಸ್ಯೆಯಾಗಿದೆ. ಜೀವದ ಭಯದಲ್ಲಿದ್ದಾರೆ. ಹೀಗಾಗಿ, ಇಲ್ಲಿನ ತಂದೆ-ತಾಯಿ, ಬಂಧು-ಬಳಗದವರು ನೋವಿನಲ್ಲಿದ್ದಾರೆ. ಯಾರೂ ಆತಂಕ ಪಡಬಾರದು ಎಂದು ಗೋವಿಂದ ಕಾರಜೋಳ ಈ ವೇಳೆ ಮನವಿ ಮಾಡಿದ್ದಾರೆ.

ಓದಿ : ನಟ ರವಿಚಂದ್ರನ್ ತಾಯಿ ನಿಧನ: ಅಂತಿಮ ದರ್ಶನಕ್ಕೆ ವ್ಯವಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.