ETV Bharat / city

ಮಾವನಂಗಡಿ ನೋಡಲು ಹೋದ ಯುವಕರು ಶವವಾಗಿ ಪತ್ತೆಯಾದರು!

ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕರಿಬ್ಬರ ಮೃತ ದೇಹಗಳನ್ನು ಇಂದು ಹೊರತೆಗೆಯಲಾಗಿದೆ.

two boys dies in chikkodi
author img

By

Published : Aug 18, 2019, 3:27 PM IST

ಚಿಕ್ಕೋಡಿ: ಕೃಷ್ಣಾ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಯುವಕರಿಬ್ಬರ ಮೃತದೇಹಗಳನ್ನು ಸತತ ಎರಡು ದಿನಗಳ ಕಾರ್ಯಾಚರಣೆಯ ಬಳಿಕ ಹೊರ ತೆಗೆಯಲಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕುಸನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ನಿವಾಸಿಗಳಾದ ಶಾಂತಿನಾಥ್ ಸಮಾಜ್ (22) ಲಕ್ಷ್ಮಣ ಸಮಾಜ್ (20) ಮೃತರು.

ಕುಸನಾಳ ಗ್ರಾಮದಲ್ಲಿದ್ದ ಶಾಂತಿನಾಥ ಮತ್ತು ಲಕ್ಷ್ಮಣ ಅವರ ಮಾವನ ಅಂಗಡಿ, ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾಗಿತ್ತು. ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಅಂಗಡಿಯ ಪರಿಸ್ಥಿತಿ ನೋಡಲು ತೆರಳಿದ್ದಾರೆ. ಈ ವೇಳೆ ಕುಸನಾಳ ಬಳಿ ಕೃಷ್ಣಾ ನದಿಗೆ ಕಾಲು ಜಾರಿ ಬಿದ್ದಿದ್ದಾರೆ. ಸತತ ಎರಡು ದಿನಗಳ ಕಾರ್ಯಾಚರಣೆಯ ನಂತರ ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ.

Intro:ಮಾವನ ಅಂಗಡಿ ನೋಡಲು ಹೋದ ಯುವಕರು ಶವವಾಗಿ ಪತ್ತೆ
Body:
ಚಿಕ್ಕೋಡಿ :

ಕೃಷ್ಣಾ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಯುವಕರು ಸತತ ಎರಡು ದಿನಗಳ ಕಾರ್ಯಾಚರಣೆಯ ನಂತರ ಮೃತ ದೇಹಗಳನ್ನು ಹೊರಕ್ಕೆ ತೆಗೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕುಸನಾಳ ಗ್ರಾಮದಲ್ಲಿ ನಡೆದಿದೆ.

ಶಾಂತಿನಾಥ್ ಸಮಾಜ್ (22) ಲಕ್ಷ್ಮಣ ಸಮಾಜ್ (20) ಮೃತ ದೇಹ ಪತ್ತೆಯಾಗಿದ್ದು ಇವರು ಕುಸನಾಳ ಬಳಿ ಕೃಷ್ಣಾ ನದಿಗೆ ಕಾಲು ಜಾರಿ ಬಿದ್ದಿದ್ದ ಇಬ್ಬರು ಯುವಕರು,

ಮೃತ ಶಾಂತಿನಾಥ ಮತ್ತು ಲಕ್ಷ್ಮಣ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ನಿವಾಸಿಗಳು,

ಕುಸನಾಳ ಗ್ರಾಮದಲ್ಲಿದ್ದ ಶಾಂತಿನಾಥ ಮತ್ತು ಲಕ್ಷ್ಮಣ ಮಾವನ ಅಂಗಡಿ, ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾಗಿದ್ದು ಮಾವನ ಅಂಗಡಿ, ನೀರು ಕಡಿಮೆಯಾದ ಹಿನ್ನಲೆ ಮಾವನ ಅಂಗಡಿಯ ಸ್ಥಿತಿ ನೋಡಿ ಬರಲು ಹೋಗಿದ್ದ ಯುವಕರು ನೀರು ಪಾಲಾಗಿದ್ದರು.

ಸತತ ಎರಡು ದಿನಗಳ ಕಾರ್ಯಾಚರಣೆಯ ನಂತರ ಮೃತ ದೇಹಗಳು ಹೊರಕ್ಕೆ ತೆಗೆದ ಸಿಬ್ಬಂಧಿಗಳು. ಈ ಘಟನೆ ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.