ETV Bharat / city

ದೇವಿ ಕಣ್ಣು ಬಿಟ್ಟಳೆಂದು ಗುಲ್ಲೆಬ್ಬಿಸಿ ರೊಕ್ಕ ಪೀಕುವ ಕಸೂಬಿಗಿಳಿದ ಪೂಜಾರಪ್ಪನ ಕರಾಮತ್‌ ಅನ್ಲಾಕ್‌!

ದೇವಿ ಕಣ್ಣು ತೆರೆದಿದ್ದಾಳೆ ಎಂಬ ಸುಳ್ಳು ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿದ ಕಾಗವಾಡ ತಾಲೂಕು ತಹಶೀಲ್ದಾರ್​​ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಾರಿಯ ಕಪಟ ನಾಟಕವನ್ನು ಬಯಲು ಮಾಡಿದರು.

god idol open eye fake news
ಸಂತೂಬಾಯಿ
author img

By

Published : Jul 1, 2021, 9:02 PM IST

ಚಿಕ್ಕೋಡಿ: ಕೆಲ ದಿನಗಳ ಹಿಂದೆ ಸಂತೂಬಾಯಿ ಎಂಬ ಹೆಸರಿನ ದೇವಿ ಕಣ್ಣು ತೆರೆದಿದ್ದಾಳೆ ಎಂದು ಸುದ್ದಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಹಲವಾರು ಭಕ್ತರ ದಂಡು ದೇವಿಯ ದರ್ಶನಕ್ಕೆ ತಂಡೋಪತಂಡವಾಗಿ ಬರುತ್ತಿತ್ತು. ಈ ಕುರಿತ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕಾಗವಾಡ ತಹರಶೀಲ್ದಾರ್​​​ ಪ್ರಮೀಳಾ ದೇಶಪಾಂಡೆ, ಪೂಜಾರಿಯ ನಾಟಕವನ್ನು ಬಯಲಿಗೆಳೆದು ತರಾಟೆಗೆ ತೆಗೆದುಕೊಂಡರು.

ದೇವಿ ಕಣ್ಣು ಬಿಟ್ಟಿದ್ದಾಳೆ ಎಂಬ ಗಿಮಿಕ್ ಮಾಡಿದ್ದ ಪೂಜಾರಿಗೆ ಕಾಗವಾಡ ತಹಶೀಲ್ದಾರರಿಂದ ಕ್ಲಾಸ್

ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಸಂತೂಬಾಯಿ ಎಂಬ ದೇವಿ ಕಣ್ಣು ಬಿಟ್ಟಿದ್ದಾಳೆ. ನಿಮ್ಮ ಆರೋಗ್ಯಕ್ಕೆ ದೇವಿಯ ದರ್ಶನ ಪಡೆದು ಪುನೀತರಾಗಿ ಎಂದು ಗುಲ್ ಎಬ್ಬಿಸಿ ಭಕ್ತರಿಂದ ಹಣ ಲಪಟಾಯಿಸುವ ಕೃತ್ಯವನ್ನು ಪೂಜಾರಿಯೊಬ್ಬ ಮಾಡಿದ್ದ. ಇದನ್ನು ನಂಬಿದ್ದ ಗ್ರಾಮದ ಮುಗ್ದ ಜನರು ಅನ್‌ಲಾಕ್ ಬಳಿಕ ನಿತ್ಯ ನೂರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬಂದು ಪೂಜೆ ಮತ್ತು ಹರಿಕೆಗಳನ್ನು ತೀರಿಸಲು ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರುತ್ತಿದ್ದರು.

ದೇವಿಗೆ ಕೃತಕ ಕಣ್ಣುಗಳನ್ನು ಹಚ್ಚಿದ್ದ ಪೂಜಾರಿ

ಇದನ್ನು ಗಂಭೀರವಾಗಿ ಪರಿಗಣಿಸಿದ ತಹಶೀಲ್ದಾರ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಾರಿಯ ಕರಾಮತ್ ಬೆಳಕಿಗೆ ತಂದರು. ಹಣದ ಆಸೆಗಾಗಿ ಪೂಜಾರಿಯೇ ದೇವಿಯ ಮೂರ್ತಿಗೆ ಕೃತಕ ಕಣ್ಣುಗಳನ್ನು ಹಚ್ಚಿರುವುದು ಪರಿಶೀಲನೆಯ ವೇಳೆ ಗೊತ್ತಾಗಿದೆ. ಅಲ್ಲದೆ, ಸ್ವತಃ ಪೂಜಾರಿ ಕೈಯಿಂದ ದೇವಿಯ ಮೂರ್ತಿಗೆ ಅಂಟಿಸಿದ್ದ ಕೃತಕ ಕಣ್ಣುಗಳನ್ನು ತೆಗೆಸಿದ್ದಾರೆ.

ಆದ್ರೆ ಈ ಕೃತ್ಯವನ್ನು ನಾನು ಮಾಡಿಲ್ಲ ಯಾರೋ ಕಿಡಿಗೇಡಿಗಳು ಮಾಡಿದ್ದಾರೆ ಎಂದು ಪೂಜಾರಿ ಹೇಳಿದ್ದಾನೆ. ಇದನ್ನು ನಂಬದ ತಹಶೀಲ್ದಾರ್ ದೇಶಪಾಂಡೆ ಇನ್ನೊಂದು ಬಾರಿ ಇಂತಹ ಘಟನೆ ಮರುಕಳಿಸಿದರೆ ಮೂಢನಂಬಿಕೆ ಕುರಿತ ಕೇಸ್ ದಾಖಲು‌ ಮಾಡಲಾಗುತ್ತದೆ ಎಂದು ಖಡಕ್ ವಾರ್ನಿಂಗ್ ಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.