ಬೆಳಗಾವಿ: ಜಿಲ್ಲಾಸ್ಪತ್ರೆ ಕೋವಿಡ್ ವಾರ್ಡ್ನಲ್ಲಿ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ಸ್ಟಾಪ್ ನರ್ಸ್ಗೆ ಮತ್ತು ದರೋಡೆಕೋರನೊಬ್ಬನಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ.
ಸ್ಟಾಫ್ ನರ್ಸ್ ಅವರನ್ನು ಇಂದು ಬೆಳಗ್ಗೆಯೇ ಕೋವಿಡ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಆಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ಮೂವರನ್ನು ಕ್ವಾರೆಂಟೈನ್ ಮಾಡಲಾಗಿದೆ.
ದರೋಡೆ ಪ್ರಕರಣದಡಿ ಮೂರು ದಿನಗಳ ಹಿಂದೆ ಬಂಧಿತನಾಗಿ, ಹಿಂಡಲಗಾ ಜೈಲು ಸೇರಿದ್ದ ಕಳ್ಳನಿಗೂ ಸೋಂಕು ತಗುಲಿದೆ. ಕ್ಯಾಂಪ್ ಠಾಣೆ ಪೊಲೀಸರು ಈತನನ್ನು ಬಂಧಿಸಿದ್ದರು.
ಅಲ್ಲದೇ ಡಿಸಿಪಿ ಸೇರಿದಂತೆ ಎಂಟು ಸಿಬ್ಬಂದಿ ಹಾಗೂ ಹಿಂಡಲಗಾ ಜೈಲಿನಲ್ಲಿನ 830 ಕೈದಿ ಮತ್ತು ಸಿಬ್ಬಂದಿಗೆ ಕೊರೊನಾ ಭೀತಿ ಎದುರಾಗಿದೆ. ಠಾಣೆಯನ್ನು ಸೀಲ್ಡೌನ್ ಮಾಡುವ ಸಾಧ್ಯತೆ ಇದೆ.