ಅಥಣಿ: ರಾಜ್ಯದಲ್ಲಿ ಮೌಢ್ಯ ನಿಷೇಧ ಕಾನೂನು ಜಾರಿಯಲ್ಲಿದೆ. ಆದರೂ ಕೆಲವು ಮಾಂತ್ರಿಕರು ಭಕ್ತಿಯ ಹೆಸರಿನಲ್ಲಿ ಜನರನ್ನು ನಂಬಿಸಿ ಮೋಸ ಮಾಡಿ ದುಡ್ಡು ಮಾಡುತ್ತಿರುವ ಕಾರ್ಯ ಮುಂದುವರೆದಿದೆ.
ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆದರ್ಶ ನಗರ- 2ರ ಫರಿದ್ ಮಕಾಂದಾರ್ ಎಂಬುವ ಮಾಂತ್ರಿಕ ಜನರನ್ನು ನಂಬಿಸಿ, ಮೊಸ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಜನರು ಕಷ್ಟಗಳನ್ನು ಈತನು ಬಂಡವಾಳ ಮಾಡಿಕೊಂಡು ಸಾವಿರಾರು ರೂಪಾಯಿ ಪೀಕುತ್ತಿದ್ದಾನೆ. ಜೊತೆಗೆ ಹಲವು ಪವಾಡಗಳನ್ನು ಮಾಡಿ, ಜನರನ್ನು ನಂಬಿಸಿ ಮೊಸ ಮಾಡುವ ಕಾರ್ಯ ಮಾಡುತ್ತಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಾಟ - ಮಂತ್ರ ಮಾಡುವುದರಿಂದ ಅಕ್ಕ- ಪಕ್ಕದ ಮನೆಗಳ ಮುಂದೆ ನಿಂಬೆ ಹಣ್ಣು, ಕುಂಕುಮ ಸೇರಿದಂತೆ ವಿವಿಧ ವಸ್ತುಗಳ ಕಾಣಿಸಿಕೊಳ್ಳುತ್ತಿದ್ದು, ವಿಚಿತ್ರ ಶಬ್ಧ ಮಾಡುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಅಷ್ಟೇ ಅಲ್ಲದೆ ಈತನ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.