ಅಥಣಿ: ಅಭಿವೃದ್ಧಿ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ಆದ್ರೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಅದೆಷ್ಟೋ ಕುಟುಂಬಗಳು ಇನ್ನೂ ಗುಡಿಸಿಲಿನಲ್ಲೇ ವಾಸವಾಗಿವೆ.
ಪ್ರತಿ ಗ್ರಾಮದಲ್ಲಿ ಸರಾಸರಿ ಶೇ.10ರಷ್ಟು ಕಡುಬಡ ಕುಟುಂಬಗಳು ಇನ್ನೂ ಗುಡಿಸಿಲಿನಲ್ಲಿ ಜೀವನ ಸಾಗಿಸುತ್ತಿವೆ. ಸರ್ಕಾರದ ಹಲವು ಯೋಜನೆಗಳು ಜಾರಿ ಮಾಡಿದರೂ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ರಾಜಕೀಯ ನಾಯಕರ ಬೆಂಬಲಿಗರಿಗೆ ಸರ್ಕಾರದಿಂದ ಬಂದ ಮನೆಗಳು ಮಂಜೂರು ಆಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸರ್ಕಾರ ಹೆಚ್ಚಿನ ಮನೆಗಳನ್ನು ಮಂಜೂರು ಮಾಡುವಂತೆ ಬಡ ಕುಟುಂಬಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲೇಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಸಮಾಜದ ಕಟ್ಟ ಕಡೆಯ ವ್ಯಕ್ತಿಗಳು ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಬೇಸಿಗೆಗಾಲ ಮತ್ತು ಮಳೆಗಾಲ ಬಂತೆಂದರೆ ಗುಡಿಸಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ತುಂಬಾನೇ ಕಷ್ಟಕರವಾಗಿದೆ. ಜೀವಭಯದಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಬಡ ಕುಟುಂಬಗಳನ್ನು ನೇರವಾಗಿ ಗುರುತಿಸಿ ಮನೆ ಮಂಜೂರು ಮಾಡುವಂತೆ ಮುಖ್ಯಮಂತ್ರಿಯವರಿಗೆ ಶಿರಹಟ್ಟಿ ಗ್ರಾಮಸ್ಥ ಮೈಬೂಬ್ ಮುಲ್ಲಾ ಆಗ್ರಹಿಸಿದ್ದಾರೆ.