ಚಿಕ್ಕೋಡಿ : ದೇವಸ್ಥಾನದ ಎದುರು ಮಕ್ಕಳನ್ನು ಕರೆದುಕೊಂಡು ಭಿಕ್ಷೆ ಬೇಡುತ್ತಿದ್ದರೂ (Woman Begging With Children's) ನೋಡಿಕೊಂಡು ಯಾಕೆ ಸುಮ್ಮನಿದ್ದೀರಿ ಎಂದು ಹಿರಿಯ ನ್ಯಾಯಾಧೀಶ ಕೆ ಎಂ ಬಸವರಾಜಪ್ಪ (Senior Judge K. M. Basavarajappa) ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ರಾಯಬಾಗದಲ್ಲಿ ನಡೆಯಿತು.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಮಾಯಕ್ಕಾ ದೇವಸ್ಥಾನಕ್ಕೆ ಹಿರಿಯ ನ್ಯಾಯಾಧೀಶ ಕೆ ಎಂ ಬಸವರಾಜಪ್ಪ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ದೇಗುಲದ ಆವರಣದಲ್ಲಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಮಹಿಳೆಯೊಬ್ಬಳು ಭಿಕ್ಷೆ ಬೇಡುತ್ತಿದ್ದಳು.
ಇದನ್ನು ಗಮನಿಸಿದ ನ್ಯಾಯಾಧೀಶರು, ಮಹಿಳೆಯನ್ನು ಕರೆಸಿ ಯಾಕೆ ಮಕ್ಕಳನ್ನ ಕರೆದುಕೊಂಡು ಭಿಕ್ಷೆ ಬೇಡುತ್ತಿದ್ದೀರಿ. ಎಲ್ಲಾದರೂ ಕೆಲಸ ಮಾಡಿ ಜೀವನ ಮಾಡಿ. ನಿಮ್ಮ ಮಕ್ಕಳ ಭವಿಷ್ಯ ನೀವೇ ಹಾಳು ಮಾಡುತ್ತಿದ್ದೀರಿ ಎಂದು ಗದರಿಸಿದರು.
ಅಲ್ಲದೆ, ನಿಮಗೆ ನಿಮ್ಮ ಮಕ್ಕಳನ್ನು ಸಾಕಲು ಆಗೋದಿಲ್ಲ ಅಂದ್ರೆ ನಾನೇ ಕರೆದುಕೊಂಡು ಹೋಗಿ ಸಾಕುತ್ತೇನೆ. ಮಕ್ಕಳನ್ನು ಸಾಕಲು ನಮ್ಮಲ್ಲಿ ಒಳ್ಳೆಯ ವ್ಯವಸ್ಥೆ ಇದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಇದೇ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲೇ ಮಕ್ಕಳು ಭಿಕ್ಷೆ ಬೇಡುತ್ತಿದ್ದರೂ ಸಹ ಪೊಲೀಸರು ಸುಮ್ಮನೇ ಏಕೆ ಇದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.