ಬೆಳಗಾವಿ: ತಾಲೂಕಿನ ವಿರಪನ ಕೊಪ್ಪ ಗ್ರಾಮದ ಅಭ್ಯರ್ಥಿಯೊಬ್ಬರು ಕಳೆದರೆಡು ದಿನಗಳ ಹಿಂದೆಯೇ ಮತದಾರರನ್ನು ದಾಂಡೇಲಿ ರೆಸಾರ್ಟ್ನಲ್ಲಿಟ್ಟಿರುವ ಆರೋಪ ಕೇಳಿಬಂದಿದೆ.
ವಿರಪನ ಕೊಪ್ಪ ಗ್ರಾಮದ ಅಭ್ಯರ್ಥಿ ಕಲನಗೌಡ ಪಾಟೀಲ ಎಂಬುವವರು ಕಳೆದೆರಡು ದಿನಗಳ ಹಿಂದೆ ನಾಲ್ಕು ಮಿನಿ ಬಸ್ಗಳಲ್ಲಿ 200ಕ್ಕೂ ಹೆಚ್ಚಿನ ಮತದಾರರನ್ನು ದಾಂಡೇಲಿ ರೆಸಾರ್ಟ್ಗೆ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರೆಸಾರ್ಟ್ನಲ್ಲಿದ್ದವರು ಇಂದು ಉಳವಿ ಶ್ರೀ ಚನ್ನಬಸವೇಶ್ವರನ ದರ್ಶನ ಮುಗಿಸಿಕೊಂಡು ಮತದಾನ ಮಾಡಲು ನಾಲ್ಕು ಮಿನಿ ಬಸ್ಗಳಲ್ಲಿ ವಿರಪನ ಕೊಪ್ಪ ಗ್ರಾಮಕ್ಕೆ ಆಗಮಿಸಿದ್ದರು.
ಓದಿ: ಮತಗಟ್ಟೆಗಳಲ್ಲಿ ವೀಲ್ಚೇರ್ಗಳಿಲ್ಲದೆ ವಯೋವೃದ್ಧರ ಪರದಾಟ
ಈ ವೇಳೆ ಮಾಧ್ಯಮದವರನ್ನು ನೋಡುತ್ತಿದ್ದಂತೆ ಹೊಲ-ಗದ್ದೆಗಳಲ್ಲಿ ಎದ್ನೋ-ಬಿದ್ನೋ ಅಂತ ಓಡೋಡಿ ಹೋಗಿದ್ದಾರೆ.