ETV Bharat / city

ಎರಡ್ಮೂರು ದಿನಗಳಲ್ಲಿ ಪಬ್, ಬಾರ್, ರೆಸ್ಟೋರೆಂಟ್ ಓಪನ್: ಸಚಿವ ನಾಗೇಶ್​​ - ಪಬ್ ಬಾರ್ ರೆಸ್ಟೋರೆಂಟ್ ಓಪನ್

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪಾಲನೆ ಹಾಗೂ ಕೋವಿಡ್ ರೋಗದ ಮುನ್ನೆಚ್ಚರಿಕೆ ವಹಿಸಿ ಎರಡ್ಮೂರು ದಿನಗಳಲ್ಲಿ ರಾಜ್ಯದ ಎಲ್ಲ ಪಬ್, ರೆಸ್ಟೋರೆಂಟ್ ತೆರೆಯಲಾಗುವುದು ಎಂದು ಅಬಕಾರಿ ಸಚಿವ ಎಚ್​​. ನಾಗೇಶ್​​ ಹೇಳಿದರು.

Pub and restaurant will open in ther four days  said minister nagesh
ಸಚಿವ ನಾಗೇಶ್​​
author img

By

Published : Aug 29, 2020, 4:08 PM IST

ಬೆಳಗಾವಿ: ರಾಜ್ಯದಲ್ಲಿ ಎರಡ್ಮೂರು ದಿನಗಳಲ್ಲಿ ಪಬ್, ಬಾರ್ ಹಾಗೂ ರೆಸ್ಟೋರೆಂಟ್ ತೆರೆಯಲಾಗುವುದು ಎಂದು ಅಬಕಾರಿ ಸಚಿವ ಎಚ್. ನಾಗೇಶ ತಿಳಿಸಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪಾಲನೆ ಹಾಗೂ ಕೋವಿಡ್ ರೋಗದ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಎರಡ್ಮೂರು ದಿನಗಳಲ್ಲಿ ರಾಜ್ಯದ ಎಲ್ಲ ಪಬ್, ರೆಸ್ಟೋರೆಂಟ್ ತೆರೆಯಲಾಗುವುದು ಎಂದರು.

ಕೋವಿಡ್ ಹಿನ್ನೆಲೆ ಈ ವರ್ಷ ಅಬಕಾರಿ ಇಲಾಖೆ ಟಾರ್ಗೆಟ್ ಮುಟ್ಟಲು ಸಾಧ್ಯವಾಗಿಲ್ಲ. ಪರಿಣಾಮ ಈವರೆಗೆ ಅಬಕಾರಿ ಇಲಾಖೆಗೆ ಮೂರು ಸಾವಿರ ಕೋಟಿ ರೂ. ನಷ್ಟ ಆಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ 1450 ಕೋಟಿ ರೂ. ಕಡಿಮೆ ಆದಾಯ ಬಂದಿದೆ. ಹೋದ ವರ್ಷ ನಮ್ಮ ಟಾರ್ಗೆಟ್ ಮೀರಿ ಇಲಾಖೆ ಗಳಿಕೆ ಮಾಡಿತ್ತು ಎಂದು ತಿಳಿಸಿದರು.

ಬೆಂಗಳೂರು ಡ್ರಗ್ಸ್ ಜಾಲ ಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲವು ಕಡೆಗಳಲ್ಲಿ ನಾರ್ಕೋಟಿಕ್ಸ್ ಜಾಲ ಇದೆ ಎಂಬ ಮಾಹಿತಿ ಇದೆ. ಪೊಲೀಸರ ಜತೆಗೆ ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತೇವೆ. ಹೊಸದಾಗಿ ಯಾವುದೇ ಲೈಸೆನ್ಸ್ ಕೊಡುವುದಿಲ್ಲ. ಅಬಕಾರಿ ಸಿಬ್ಬಂದಿಗೆ ವೆಪನ್ ಕೊಡುವ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಎಲ್ಲಾ ಇಲಾಖೆಗಳಲ್ಲೂ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ಮಾಡ್ತಾರೆ ಎಂಬ ಅರೋಪ ಸತ್ಯಕ್ಕೆ ದೂರವಾಗಿದೆ. ಸಿಎಂ ಪುತ್ರ ವಿಜಯೇಂದ್ರ ನಮ್ಮ ಇಲಾಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಸ್ಪಷ್ಟ ಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.