ETV Bharat / city

ಅಥಣಿಯ ಖಾಸಗಿ ಕಾಲೇಜಿನ 63 ವಿದ್ಯಾರ್ಥಿಗಳಿಗೆ ಕೊರೊನಾ.. ಕಟ್ಟಡ ಸೀಲ್‌ಡೌನ್‌ - ಬೆಳಗಾವಿ ವಿದ್ಯಾರ್ಥಿಗಳಿಗೆ ಕೊರೋನಾ ದೃಢ

ಯಂಕಂಚ್ಚಿ ಪ್ರೌಢ ಶಾಲೆ ಹಾಗೂ ಬನಜವಾಡ ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿದೆ. ಕಾಲೇಜು ಹಾಗೂ ಶಾಲೆಯನ್ನು ಸೀಲ್​ಡೌನ್ ಮಾಡಲಾಗಿದೆ..

belagavi
ಕಾಲೇಜು ಸೀಲ್​ಡೌನ್​
author img

By

Published : Jan 15, 2022, 2:58 PM IST

Updated : Jan 15, 2022, 3:34 PM IST

ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಬನಜವಾಡ್ ಖಾಸಗಿ ಕಾಲೇಜಿನ 63 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿದೆ. ಮುಂಜಾಗ್ರತಾ ಕ್ರಮವಾಗಿ ಶಾಲೆಯನ್ನು ಸೀಲ್​ಡೌನ್ ಮಾಡಲಾಗಿದೆ ಎಂದು ವೈದ್ಯಾಧಿಕಾರಿ ಬಸವರಾಜ್​ ಕಾಗೆ ಹೇಳಿದರು.

ತಾಲೂಕು ವೈದ್ಯಾಧಿಕಾರಿ ಬಸವರಾಜ ಕಾಗೆ ಮಾತು

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಂಕು ದೃಢಪಟ್ಟ 63 ವಿದ್ಯಾರ್ಥಿಗಳಲ್ಲಿ ಅಥಣಿ ಪಟ್ಟಣದ 18 ವಿದ್ಯಾರ್ಥಿಗಳು ಇದ್ದಾರೆ. ಇನ್ನುಳಿದವರು ಬೇರೆ ಬೇರೆ ಊರಿನವರಾಗಿದ್ದಾರೆ.

ಅಧಿಕಾರಿಗಳ ಜೊತೆ ಚರ್ಚಿಸಿ ಮುಂಜಾಗ್ರತಾ ಕ್ರಮವಹಿಸಲಾಗಿದೆ. ಸೋಂಕು ತಗುಲಿದ ವಿದ್ಯಾರ್ಥಿಗಳನ್ನು ಹೋಂ ಐಸೋಲೇಶನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಅಥಣಿ ಹಾಗೂ ಕಾಗವಾಡ ತಾಲೂಕಿನ ಪ್ರತಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಸದ್ಯ ತಾಲೂಕಿನ ಯಂಕಂಚ್ಚಿ ಪ್ರೌಢ ಶಾಲೆ ಹಾಗೂ ಬನಜವಾಡ ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿದೆ. ಕಾಲೇಜು ಹಾಗೂ ಶಾಲೆಯನ್ನು ಸೀಲ್​ಡೌನ್ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಬಸವರಾಜ ಕಾಗೆ ತಿಳಿಸಿದರು.

ಇದನ್ನೂ ಓದಿ: ಚಿತ್ರಕಲೆಯಿಂದಾಗಿ ಶಿವಮೊಗ್ಗದ ವಿದ್ಯಾರ್ಥಿನಿಗೆ ದೆಹಲಿ ಗಣರಾಜ್ಯೋತ್ಸವದಲ್ಲಿ ಭಾಗಿಯಾಗುವ ಅವಕಾಶ

Last Updated : Jan 15, 2022, 3:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.