ETV Bharat / city

ಬೆಳಗಾವಿಯಲ್ಲಿ ಸೀಲ್ ಡೌನ್ ವಿಚಾರದಲ್ಲಿಯೂ ನಡೆಯುತ್ತಿದೆಯೇ ರಾಜಕೀಯ..? - ಬೆಳಗಾವಿ ಸೀಲ್ ಡೌನ್

ಬೆಳಗಾವಿ ಜಿಲ್ಲೆಯಲ್ಲಿ ಸೀಲ್ ಡೌನ್ ವಿಚಾರದಲ್ಲಿಯೂ ರಾಜಕೀಯ ನಡೆಯುತ್ತಿದ್ದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಸದಾಶಿವ ನಗರದಲ್ಲಿ ಕೊರೊನಾ ಸೋಂಕಿತ ಪತ್ತೆಯಾದ ಪ್ರದೇಶದ ಬಳಿ ಡಿಸಿಎಂ ಲಕ್ಷ್ಮಣ ಸವದಿ ಮನೆ ಇದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಸವದಿ ಮನೆಗೆ ಹೋಗುವ ರಸ್ತೆಯನ್ನು ಸೀಲ್ ಡೌನ್ ಮಾಡದೇ ಹಾಗೆಯೇ ಬಿಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

Politics of seal-down At Belgavi
ಬೆಳಗಾವಿ ಜಿಲ್ಲೆಯಲ್ಲಿ ಸೀಲ್ ಡೌನ್ ವಿಚಾರದಲ್ಲಿಯೂ ರಾಜಕೀಯ
author img

By

Published : Aug 2, 2020, 12:51 PM IST

ಬೆಳಗಾವಿ: ಜಿಲ್ಲೆಯಲ್ಲಿ ಸೀಲ್ ಡೌನ್ ವಿಚಾರದಲ್ಲಿಯೂ ರಾಜಕೀಯ ನಡೆಯುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಅದಕ್ಕೆ ಪುಷ್ಟಿ ಎಂಬಂತೆ ಮಹಾನಗರ ಪಾಲಿಕೆ ಸಿಬ್ಬಂದಿ ಡಿಸಿಎಂ ಲಕ್ಷ್ಮಣ ಸವದಿ ಮನೆಗೆ ಸಂಪರ್ಕ ಒದಗಿಸುವ ರಸ್ತೆಯನ್ನು ಸೀಲ್ ಡೌನ್ ಮಾಡದೇ ಹಾಗೆ ಬಿಟ್ಟಿದ್ದಾರೆ ಎನ್ನಲಾಗ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸೀಲ್ ಡೌನ್ ವಿಚಾರದಲ್ಲಿಯೂ ರಾಜಕೀಯ?

ಸದಾಶಿವ ನಗರದಲ್ಲಿ ರಸ್ತೆಯೊಂದರ ಅಪಾರ್ಟ್‌ಮೆಂಟ್​​ನಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆ ಪ್ರದೇಶದ ಸುತ್ತಲೂ 50 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಬೇಕಿತ್ತು. ಆದ್ರೆ, ಕೊರೊನಾ ಸೋಂಕಿತ ಪತ್ತೆಯಾದ ಪ್ರದೇಶ ಬಳಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮನೆ ಇದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಸವದಿ ಮನೆಗೆ ಹೋಗುವ ರಸ್ತೆಯನ್ನು ಸೀಲ್ ಡೌನ್ ಮಾಡದೇ ಹಾಗೆಯೇ ಬಿಟ್ಟಿದ್ದಾರೆ. ಕೊರೊನಾ ಸೋಂಕಿತನ ಮನೆ, ಅಕ್ಕಪಕ್ಕದ ಹಾಗೂ ಮುಂದಿನ 10 ಮೀಟರ್​ನಷ್ಟು ರಸ್ತೆಯನ್ನು ಮಾತ್ರ ಸೀಲ್​ಡೌನ್ ಮಾಡಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾನ್ಯ ಜನರಿಗೊಂದು, ಉಳ್ಳವರಿಗೊಂದು ಎಂಬ ನ್ಯಾಯ ಎಂಬಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ‌ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಕಾರಣ, ಅದೇ ಮಾರ್ಗದ ರಸ್ತೆಯಲ್ಲಿ ಕಳೆದ 15 ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಮರಾಮನ್​ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅಂದು ಪಾಲಿಕೆ ಅಧಿಕಾರಿಗಳು ಸೋಂಕಿತ ತಂಗಿದ್ದ ಬಿಲ್ಡಿಂಗ್ ಸುತ್ತಮುತ್ತಲಿನ 50ಕ್ಕೂ ಹೆಚ್ಚಿನ ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಿದ್ದರು. ಇದರಿಂದಾಗಿ ಲಕ್ಮ್ಷೀ ಕಾಂಪ್ಲೆಕ್ಸ್​ನಿಂದ ಸುರೇಶ ಅಂಗಡಿಯವರ ಮನೆಗೆ ಸಂಪರ್ಕ ಒದಗಿಸುವ ಮುಖ್ಯ ರಸ್ತೆ‌ ಸಂಚಾರ ಬಂದ್ ಆಗಿತ್ತು.

ಆದರಿಂದು ಪಾಲಿಕೆ ಅಧಿಕಾರಿಗಳು, ಡಿಸಿಎಂ ಲಕ್ಷ್ಮಣ ಸವದಿ ಮನೆಗೆ ಸಂಪರ್ಕ ಒದಗಿಸುವ ರಸ್ತೆಯಲ್ಲಿನ ಬಿಲ್ಡಿಂಗ್​ನಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದ್ ಪರಿಣಾಮ ಬಿಲ್ಡಿಂಗ್ ಎದುರಿಗಿನ ರಸ್ತೆಯನ್ನು ಮಾತ್ರ ಸೀಲ್ ಡೌನ್ ಮಾಡಿ, ಅವರ ಮನೆಗೆ ಹೋಗುವ ರಸ್ತೆಯಲ್ಲಿನ ಅಂಗಡಿಗಳನ್ನು ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ. ರಸ್ತೆ ಸಂಪರ್ಕವನ್ನು ಹಾಗಯೇ ಬಿಟ್ಟಿದ್ದಾರೆ. ಇದರಿಂದಾಗಿ ರಾಜಕಾರಣಿಗಳು, ಶ್ರೀಮಂತರಿಗೊಂದು ನ್ಯಾಯವಾದ್ರೆ ಬಡವರಿಗೊಂದು ನ್ಯಾಯವೇ ಎಂಬ ಪ್ರಶ್ನೇ ಸಾರ್ವಜನಿಕರಲ್ಲಿ ಮೂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.