ಬೆಳಗಾವಿ: ಸಂಕಷ್ಟಕ್ಕೆ ಒಳಗಾಗಿರೋ ಶಾಮಿಯಾನಾ ಮತ್ತು ಪೆಂಡಾಲ್ ಅಸೋಸಿಯೇಷನ್ ಅವರಿಗೂ ಪ್ಯಾಕೇಜ್ ಘೋಷಣೆ ಮಾಡುವಂತೆ ಸಚಿವ ಶೆಟ್ಟರ್ ಗೆ ಮನವಿ ಸಲ್ಲಿಸಲಾಯಿತು.
ಶಾಮಿಯಾನ ಮತ್ತು ಪೆಂಡಾಲ್ ಡೆಕೋರೇಟರ್ಸ್ ಮಾಲೀಕರು, ಪೆಂಡಾಲ್ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅವರಿಗೂ ಪರಿಹಾರ ಹಾಗೂ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಉಸ್ತವಾರಿ ಸಚಿವ ಜಗದೀಶ ಶೆಟ್ಟರ್ ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿಕೊಂಡರು.
ಫೆಬ್ರವರಿಯಿಂದ-ಮೇ ವರೆಗೆ ಶಾಮಿಯಾನಾ ಮತ್ತು ಪೆಂಡಾಲ್ ಡೆಕೋರೇಟರ್ಸ್ ಗಳಿಗೆ ಸುಗ್ಗಿ ಕಾಲ. ಈ ಅವಧಿಯಲ್ಲಿ ಶುಭ ಸಮಾರಂಭಗಳಿಂದಲೇ ವರ್ಷವಿಡೀ ಜೀವನ ಸಾಗಿಸಲಾಗುತ್ತಿತ್ತು. ಆದರೆ, ಇದೇ ಅವಧಿಯಲ್ಲಿ ಈ ವರ್ಷ ಲಾಕ್‌ಡೌನ್ ಘೋಷಣೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಎಂ ಇವರಿಗೂ ಪ್ಯಾಕೇಜ್ ಮತ್ತು ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಶಾಮಿಯಾನಾ ಮತ್ತು ಪೆಂಡಾಲ್ ಅಸೋಸಿಯೇಷನ್ ಗೆ ರಾಜ್ಯ ಸರಕಾರದಿಂದ ಪರಿಹಾರ ಘೋಷಣೆ ಮಾಡುವಂತೆ ರಾಜ್ಯದಲ್ಲಿಯೇ ಮೊದಲ ಭಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಶಾಮಿಯಾನಾ ಮತ್ತು ಪೆಂಡಾಲ್ ಡೆಕೋರೇಟರ್ಸ್ ವತಿಯಿಂದ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.