ಚಿಕ್ಕೋಡಿ : ಕೆಎಸ್‌ಆರ್‌ಟಿಸಿ ಈಗಾಗಲೇ ₹2,652 ಕೋಟಿ ನಷ್ಟವನ್ನ ಅನುಭವಿಸುತ್ತಿದೆ. ಆದರೂ ಸಂಸ್ಥೆಯ 1 ಲಕ್ಷ 30 ಸಾವಿರ ಸಿಬ್ಬಂದಿಗೆ, ಪ್ರತಿ ತಿಂಗಳು 126 ಕೋಟಿ ವೇತನ ನೀಡಬೇಕಾಗುತ್ತದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಪ್ರವಾಸಿ ಮಂದಿರ ಹಾಗೂ ಅಂಬೇಡ್ಕರ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು 326 ಕೋಟಿ ನೀಡಿದ್ದಾರೆ. ಸಾರಿಗೆ ಇಲಾಖೆ ಸಿಬ್ಬಂದಿಗೆ 2 ತಿಂಗಳ ವೇತನ ನೀಡಲಾಗಿದೆ. ಅಲ್ಲದೆ ವೇತನ ರಹಿತ ರಜೆ ಪಡೆಯುವಂತೆ ಸಿಬ್ಬಂದಿಗೆ ಒತ್ತಾಯ ಹಾಕುತ್ತಿಲ್ಲ ಎಂದರು.
ಕೊರೊನಾದಿಂದ ಜನರು ಸಂಚಾರ ಮಾಡುತ್ತಿಲ್ಲ, ಇದರಿಂದ ಕೆಎಸ್ಆರ್‌ಟಿಸಿ ನಷ್ಟದಲ್ಲಿದೆ. ಆದರೆ, ಯಾವುದೇ ಕಾರಣಕ್ಕೂ ಸಿಬ್ಬಂದಿಗೆ ವೇತನ ನೀಡುವುದು ನಿಲ್ಲಿಸುವುದಿಲ್ಲ ಎಂದು ಹೇಳಿದರು.