ETV Bharat / city

ನನ್ನ ಗಂಡನ ಸಾವು ಆತ್ಮಹತ್ಯೆ ಅಲ್ಲ, ಅದು ಕೊಲೆ.. ಈಶ್ವರಪ್ಪನಿಗೆ ತಕ್ಕ ಶಿಕ್ಷೆಯಾಗಲಿ: ಸಂತೋಷ್​ ಪತ್ನಿ ಜಯಶ್ರೀ

ನನ್ನ ಗಂಡನ ಸಾವು ಆತ್ಮಹತ್ಯೆ ಅಲ್ಲಾ ಕೊಲೆಯಾಗಿದೆ. ಗಂಡನ ಸಾವಿಗೆ ಕಾರಣವಾದ ಈಶ್ವರಪ್ಪನಿಗೆ ತಕ್ಕ ಶಿಕ್ಷೆ ಆಗಲಿ ಎಂದು ಮೃತ ಸಂತೋಷ್​ ಪತ್ನಿ ಜಯಶ್ರೀ ಪಾಟೀಲ್​ ಆಗ್ರಹಿಸಿದ್ದಾರೆ.

my husband death is not suicide says Santosh wife, my husband death is murder says Jayashree, contractor santosh suicide case, contractor santosh suicide case update, Minister Eshwarappa resign issue, ನನ್ನ ಪತಿ ಸಾವು ಆತ್ಮಹತ್ಯೆ ಅಲ್ಲ ಎಂದ ಸಂತೋಷ್ ಪತ್ನಿ, ನನ್ನ ಪತಿ ಸಾವು ಕೊಲೆ ಎಂದ ಜಯಶ್ರೀ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸುದ್ದಿ, ಸಚಿವ ಈಶ್ವರಪ್ಪ ರಾಜೀನಾಮೆ ವಿಚಾರ,
ಈಶ್ವರಪ್ಪನಿಗೆ ತಕ್ಕ ಶಿಕ್ಷೆಯಾಗಲಿ ಎಂದ ಸಂತೋಷ್​ ಪತ್ನಿ ಜಯಶ್ರೀ
author img

By

Published : Apr 13, 2022, 10:21 AM IST

ಬೆಳಗಾವಿ: ರಾಜ್ಯದಲ್ಲಿ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣ ಸದ್ದು ಮಾಡ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ ಎಸ್​ ಈಶ್ವರಪ್ಪ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ನನ್ನ ಗಂಡನ ಸಾವು ಆತ್ಮಹತ್ಯೆ ಅಲ್ಲಾ. ಅದು ಕೊಲೆ. ಗಂಡನ ಸಾವಿಗೆ ಕಾರಣವಾದ ಈಶ್ವರಪ್ಪನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಮೃತ ಸಂತೋಷ್​ ಪತ್ನಿ ಜಯಶ್ರೀ ಪಾಟೀಲ್​ ಆಗ್ರಹಿಸಿದ್ದಾರೆ.

ಈಶ್ವರಪ್ಪನಿಗೆ ತಕ್ಕ ಶಿಕ್ಷೆಯಾಗಲಿ ಎಂದ ಸಂತೋಷ್​ ಪತ್ನಿ ಜಯಶ್ರೀ

ನಗರದಲ್ಲಿ ಗುತ್ತಿಗೆದಾರ ಸಂತೋಷ್​ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಈಶ್ವರಪ್ಪ ಅವರು ಕೇಳಿರುವ ಕಮಿಷನ್ ಬಗ್ಗೆ ‌ನನ್ನ ಪತಿ ನನ್ನ ಮುಂದೆ ಹೇಳಿಕೊಂಡಿದ್ರು. 4 ಕೋಟಿ ಕಾಮಗಾರಿ ಮಾಡಿದ್ದೇನಿ‌. ಈಶ್ವರಪ್ಪ ಶೇ. 40ರಷ್ಟು ಕಮಿಷಿನ್ ಕೇಳುತ್ತಿದ್ದಾರೆ ಅಂತಾ ಹೇಳಿಕೊಂಡಿದ್ದರು ಎಂಬುದನ್ನು ಜಯಶ್ರೀ ಪಾಟೀಲ್​ ತಿಳಿಸಿದ್ದಾರೆ.

ಅವರಿಗೆ ನಾನು ಶೇ. 40ರಷ್ಟು ಕಮಿಷನ್ ಕೊಟ್ರೆ ನಾನು‌ ಸಂಪೂರ್ಣ ಹಾಳಾಗ್ತೇನಿ. ನನ್ನ ಮೈಮೇಲೆ ಇದ್ದ ಬಂಗಾರ ಅಡವಿಟ್ಟು 108 ಕಾಮಗಾರಿ ಮಾಡಿಸಿದ್ರು. ಬಿಲ್ ಬಂದ್ಮೇಲೆ ಬಂಗಾರ ಆಭರಣಗಳನ್ನ ಬಿಡಿಸಿ ಕೊಡ್ತಿನಿ ಅಂತಾ ಹೇಳಿದ್ರು. ಆತ್ಮಹತ್ಯೆಗೂ ಮುನ್ನ ಸಂಜೆ ಏಳು ಗಂಟೆಗೆ ನನ್ನ ಮತ್ತು ಮಗನ ಜೊತೆಗೆ ಚೆನ್ನಾಗಿಯೇ ಮಾತನಾಡಿದ್ರು. ನೆಟ್ವರ್ಕ್ ಬರ್ತಿಲ್ಲ, ಬೆಳಗ್ಗೆ ಮಾತನಾಡ್ತೇನಿ‌ ಅಂತಾ ಹೇಳಿದ್ರು. ನನ್ನ ಜೊತೆಗೆ ನಗು ನಗುತ್ತಲೇ ಮಾತನಾಡಿದ್ದರು. ಬೆಳಗ್ಗೆ ಫೋನ್ ಮಾಡಿದ್ರೆ ಫೋನ್ ರಿಸಿವ್ ಮಾಡಿರಲಿಲ್ಲ. ಬೇರೆಯವರು ಮೂಲಕ ವಿಷಯ ಗೊತ್ತಾಯ್ತು ಎಂದು ಕಣ್ಣೀರು ಹಾಕಿದ್ರು.

ಓದಿ: ಸಂತೋಷ್​ ಪಾಟೀಲ್ ಆತ್ಮಹತ್ಯೆ ಪ್ರಕರಣ: ಉಡುಪಿಯ ಲಾಡ್ಜ್‌ಗೆ ಆಗಮಿಸಿದ ಕುಟುಂಬಸ್ಥರು

ಸಾಲಸೋಲ ಮಾಡಿ ಸ್ವಗ್ರಾಮದಲ್ಲಿ ಕನಸಿನ ಮನೆಯನ್ನು ಕಟ್ಟಿಸಿದ್ರು. ಅದು ಅವರ ಕನಸಿನ ಮನೆ ಆಗಿತ್ತು. ಅದಕ್ಕೆ ಕನಸ್ಸು ಅಂತಾನೇ ಹೆಸರು ಇಟ್ಟಿದ್ರು. ಕಾಮಗಾರಿ ಬಿಲ್ ಬರುತ್ತೆ, ಮನೆ ಗೃಹಪ್ರವೇಶ ಮಾಡೋಣ ಅಂತಿದ್ರು. ಈಗ ಎಲ್ಲವನ್ನೂ ಬಿಟ್ಟು ಹೋಗಿದ್ದಾರೆ. ನನ್ನ, ನನ್ನ ಮಗನನ್ನು ಆನಾಥ ಮಾಡಿದ್ದಾರೆ. ನಮಗೆ ನ್ಯಾಯ ಬೇಕು. ಸಚಿವ ಈಶ್ವರಪ್ಪಗೆ ಶಿಕ್ಷೆ ಆಗಲೇಬೇಕು ಎಂದು ಸಂತೋಷ ಪತ್ನಿ ಜಯಶ್ರೀ ದುಃಖ ತೋಡಿಕೊಂಡರು.

ಇದೇ ವೇಳೆ ಮಾತಾನಾಡಿದ ಮೃತ ಸಂತೋಷಗ್​ ತಾಯಿ ಪಾರ್ವತಮ್ಮ, ನನ್ನ ಮಗ ಬೇಕು. ನನ್ನ ಮಗನನ್ನ ತಂದು ಕೊಡಿ ಅಂತಾ ಕಣ್ಣೀರು ಹಾಕಿದ್ರು. ನನ್ನನ್ನ ಮಮ್ಮಿ.. ಮಮ್ಮಿ .. ಎಂದು ಕರೆಯುವ ಮಗ ವಾಪಸ್ ಬರ್ತಾನಾ?.. ಬಿಲ್ ಆಗ್ತಾಯಿಲ್ಲ ಅಮ್ಮ, ಬಿಲ್ ಮಾಡಿಸಿಕೊಂಡು ಬರ್ತಿನಿ ಅಂತ ಹೇಳಿದ್ದ. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತ ವ್ಯಕ್ತಿ ಅಲ್ಲಾ. ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.