ಬೆಳಗಾವಿ: ಧರ್ಮವೀರ ಸಂಭಾಜಿ ಮಹಾರಾಜರ 'ಬಲಿದಾನ ಮಾಸ' ನಿಮಿತ್ತ ಬೆಳಗಾವಿಯ 30ಕ್ಕೂ ಅಧಿಕ ಸ್ವಾಮೀಜಿಗಳು 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ವೀಕ್ಷಿಸಿದರು. ನಗರದ ನ್ಯೂಕ್ಲಿಯಸ್ ಮಾಲ್‌ನಲ್ಲಿರುವ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ವಿಶ್ವಹಿಂದೂ ಪರಿಷತ್, ಬಜರಂಗದಳ ವತಿಯಿಂದ ಇದನ್ನು ಆಯೋಜನೆ ಮಾಡಲಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರ ಮಗ ಸಂಭಾಜಿ ಮಹಾರಾಜರನ್ನು ಔರಂಗಜೇಬ್ ಹತ್ಯೆ ಮಾಡಿದ ದಿನವನ್ನು 'ಬಲಿದಾನ ಮಾಸ' ಎಂದು ಆಚರಿಸಲಾಗುತ್ತದೆ. ಇದರ ನಿಮಿತ್ತ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಚಿತ್ರ ವೀಕ್ಷಣೆಗೂ ಮುನ್ನ ಸ್ವಾಮೀಜಿಗಳು ಸಂಭಾಜಿ ವೃತ್ತದಲ್ಲಿರುವ ಧರ್ಮವೀರ ಸಂಭಾಜಿ ಪ್ರತಿಮೆಗೆ ಗೌರವ ಸಲ್ಲಿಸಿದರು.
ಜಿಲ್ಲೆಯ 30ಕ್ಕೂ ಹೆಚ್ಚು ಮಠಾಧೀಶರು ಧರ್ಮವೀರ ಸಂಭಾಜಿರಾವ್ ಪ್ರತಿಮೆಗೆ ನಮಿಸಿ ಬಳಿಕ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ವೀಕ್ಷಣೆಗೆ ತೆರಳಿದರು. ಕಿತ್ತೂರು ಕಲ್ಮಠದ ರಾಜಯೋಗೀಂದ್ರ ಸ್ವಾಮೀಜಿ, ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಮಹಾಸ್ವಾಮೀಜಿ, ಬೆಳಗಾವಿಯ ರುದ್ರಕೇಸರಿ ಸ್ವಾಮೀಜಿ, ಗದಗಿನ ಶಿವಾನಂದ ಮಠದ ಸದಾಶಿವಾನಂದ ಸ್ವಾಮೀಜಿ, ಕಡೋಲಿಯ ದುರದುಂಡೀಶ್ವರ ಮಠದ ಸ್ವಾಮೀಜಿ ಸೇರಿ ಹಲವರು ಚಿತ್ರವೀಕ್ಷಣೆ ಮಾಡಿದ್ದಾರೆ. ಸ್ವಾಮೀಜಿಗಳಿಗೆ ವಿಎಚ್ಪಿ ಹಾಗೂ ಭಜರಂಗದಳ ಮುಖಂಡರು ಸಾಥ್ ನೀಡಿದರು.
ಇದನ್ನೂ ಓದಿ: 'ಕಾಶ್ಮೀರ್ ಫೈಲ್ಸ್' ಬಿಜೆಪಿ ಅಜೆಂಡಾ ಮೇಲೆ ಮಾಡಿದ ಸಿನಿಮಾ: ಪುನೀತ್ ಕೊನೆಯ ಚಿತ್ರಕ್ಕೆ ತೊಂದರೆ ಸರಿಯಲ್ಲ ಎಂದ ಡಿಕೆಶಿ