ಬೆಳಗಾವಿ: ಜಿಲ್ಲೆಯ ಹೊನಗಾ ಗ್ರಾಮಕ್ಕೆ ಬಂದಿದ್ದ ಸಚಿವ ಆರ್.ವಿ. ದೇಶಪಾಂಡೆ, ಅನ್ನಭಾಗ್ಯ ಯೋಜನೆ ತಂದವರು ಯಾರು ಎಂದು ಕೇಳಿದ ಪ್ರಶ್ನೆಗೆ ಜನರು ಮೋದಿ ಎಂದು ಉತ್ತರಿಸಿದ್ದಾರೆ.
ಜಿಲ್ಲೆಯ ಹೊನಗಾ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಸಚಿವ ಆರ್. ವಿ ದೇಶಪಾಂಡೆ, ಜನರ ಜೊತೆ ಮಾತನಾಡುತ್ತಾ ಅನ್ನಭಾಗ್ಯ ತಂದವರು ಯಾರು ಎಂದು ಕೇಳಿದರು. ಇದಕ್ಕೆ ಜನರು ಮೋದಿ ಮೋದಿ ಎಂದು ಹೇಳಿದ್ದು, ಸಚಿವರು ಪ್ರಶ್ನೆ ಕೇಳಿ ಪೇಚಿಗೆ ಸಿಲುಕಿದಂತಾಯಿತು.