ETV Bharat / city

ಸಾರ್ವತ್ರಿಕ ಚುನಾವಣೆ ಮೇಲೆ ಈ ಫಲಿತಾಂಶ ಪರಿಣಾಮ ಬೀರಲ್ಲ: ಮಹೇಶ್ ಕುಮಟಳ್ಳಿ - Athani

ಹಾನಗಲ್​​​ನಲ್ಲಿ ಸೋತಿದ್ದರೂ ಈ ಚುನಾವಣೆಯ ಫಲಿತಾಂಶ ಬಿಜೆಪಿ ಸರ್ಕಾರ ಹಾಗು ಮುಖ್ಯಮಂತ್ರಿ ನಾಯಕತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶಾಸಕ ಕುಮಟಳ್ಳಿ ಹೇಳಿದರು.

MLA Mahesh Kumatalli
ಶಾಸಕ ಮಹೇಶ್ ಕುಮಟಳ್ಳಿ
author img

By

Published : Nov 3, 2021, 4:21 PM IST

ಅಥಣಿ: ಸಿಂದಗಿ ಹಾಗು ಹಾನಗಲ್ ಉಪಚುನಾವಣೆ ಫಲಿತಾಂಶ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.

ಉಪಚುನಾವಣೆ ಫಲಿತಾಂಶದ ಬಗ್ಗೆ ಶಾಸಕ ಮಹೇಶ್ ಕುಮಟಳ್ಳಿ ಪ್ರತಿಕ್ರಿಯೆ

ಅಥಣಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್​​ ಅಲ್ಪಮತಗಳಿಂದ ಸೋತಿದ್ದಾರೆ. ಜನರ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದರು.

ಅದೇ ರೀತಿ, ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಅವರು 30 ಸಾವಿರ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ. 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ರಚನೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಲೆ ಏರಿಕೆ ಹಾನಗಲ್​​ ಉಪಚುನಾವಣೆ ಸೋಲಿಗೆ ಕಾರಣ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಟಳ್ಳಿ, ಬೆಲೆ ಏರಿಕೆ ಇವತ್ತಿನಿಂದ ಆಗುತ್ತಿಲ್ಲ. ಕಳೆದ 60 ವರ್ಷಗಳಿಂದ ಬೆಲೆ ಏರಿಕೆಯಾಗುತ್ತಿದೆ. ದಿನಕಳೆದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಆಗುತ್ತಿದೆ. ನಾನು ಚಿಕ್ಕವನಿದ್ದಾಗ 10 ಪೈಸೆ ಹಣ ಚಲಾವಣೆಯಲ್ಲಿತ್ತು. ಆದರೆ ಸದ್ಯ ಹತ್ತು, ಇಪ್ಪತ್ತು ಪೈಸೆಗಳು ಚಲಾವಣೆ ಆಗುತ್ತಿಲ್ಲ. ದಿನ ಕಳೆದಂತೆ ದರ ಏರಿಕೆ ಆಗುತ್ತಿದೆ. ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆೆಯಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.

ಕಾನೂನು ಬದ್ದವಾಗಿ ಮೀಸಲಾತಿ

ಪಂಚಮಸಾಲಿ ಸಮಾಜದ ಸಿಟ್ಟು, ಹಾನಗಲ್ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಗೌರವವನ್ನು ನೀಡಿದೆ. ಇದರಲ್ಲಿ ಎರಡು ಮಾತಿಲ್ಲ. ಪಂಚಮಸಾಲಿ ಸಮಾಜದ ಜತೆಗೆ ಹಲವಾರು ಜನಾಂಗದವರು ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಕಾನೂನುಬದ್ದವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುತ್ತಾ ಎಂದು ಹೇಳಿದರು.

ಸಿಂದಗಿ ಉಪಚುನಾವಣೆ ಉಸ್ತುವಾರಿಯಾಗಿರುವ ಲಕ್ಷ್ಮಣ ಸವದಿ ಚುನಾವಣೆ ಚಾಣಾಕ್ಷ. ಅವರಿಗೆ ನೀಡಿದ ಕ್ಷೇತ್ರದ ಚುಣಾವಣೆಯಲ್ಲಿ ಜಯ ಸಾಧಿಸುತ್ತಾರೆ. ಅವರಿಗೆ ವರಿಷ್ಠರು ಸಚಿವ ಸ್ಥಾನ ನೀಡಲಿ ಎಂದು ಶಾಸಕ ಕುಮಟಳ್ಳಿ ಹೇಳಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ:

ಕಳೆದ ಬಾರಿ ಕೃಷ್ಣಾ ನದಿ ಪ್ರವಾಹಕ್ಕೆ ತಾಲೂಕಿನ ಹಲವಾರು ಗ್ರಾಮಗಳು ಬಾಧಿತವಾಗಿವೆ. ಸರ್ಕಾರದಿಂದ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಮಾನದಂಡದ ಪ್ರಕಾರ, ತುರ್ತು 10 ಸಾವಿರ ರೂ.ಪರಿಹಾರ ಹಣ ಈಗಾಗಲೇ ಹಲವಾರು ಗ್ರಾಮಗಳಿಗೆ ನೀಡಲಾಗಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.