ಸಚಿವ ಉಮೇಶ ಕತ್ತಿ ಈಗಲೂ ಖುಷ್.. ಖಾತೆ ಬಗ್ಗೆ ಯಾವುದೇ ಅಸಮಾಧಾನ ಇಲ್ವಂತೆ.. - Belgavi
ಈ ವೇಳೆ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ತೋರಿರುವ ಆನಂದ್ ಸಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಆನಂದ್ ಸಿಂಗ್ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ ಎಂದು ಉತ್ತರಿಸಿದರು..
![ಸಚಿವ ಉಮೇಶ ಕತ್ತಿ ಈಗಲೂ ಖುಷ್.. ಖಾತೆ ಬಗ್ಗೆ ಯಾವುದೇ ಅಸಮಾಧಾನ ಇಲ್ವಂತೆ.. Minister Umesh Katti](https://etvbharatimages.akamaized.net/etvbharat/prod-images/768-512-12766086-thumbnail-3x2-net.jpg?imwidth=3840)
ಬೆಳಗಾವಿ : ನಾನು ನನ್ನ ಇಲಾಖೆಯ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ. ನನಗೆ ನೀಡಿರುವ ಖಾತೆ ಬಗ್ಗೆ ಸಮಾಧಾನ ಇದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು. ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾನು ನನ್ನ ಇಲಾಖೆ ಕೆಲಸಕ್ಕೆ ದೆಹಲಿಗೆ ಹೋಗಿ ಬಂದಿದ್ದೇನೆ.
ಅಸಮಾಧಾನದಿಂದ ಹೋಗಿ ಬಂದಿಲ್ಲ. ಒಳ್ಳೆಯದಾಗುತ್ತದೆ. ಯಾವ ಖಾತೆ ನೀಡಿದರೂ ನಿರ್ವಹಿಸಬೇಕು ಎಂಬ ಹಠ ನಂಗಿತ್ತು ಎಂದರು. ಬೆಳಗಾವಿ ಟು ದೆಹಲಿ ವಿಮಾನಯಾನ ಆರಂಭ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿ ವಿಮಾನ ಸಾಂಗ್ಲಿ, ಕೊಲ್ಲಾಪುರ, ಹುಬ್ಬಳ್ಳಿ, ರತ್ನಗಿರಿ ಮಾರ್ಗದಲ್ಲಿ ಸಂಚರಿಸಲಿದ್ದು, ಸುಗಮವಾಗಿ ನಡೆಯಬೇಕು ಎಂದರು.
ಈ ವೇಳೆ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ತೋರಿರುವ ಆನಂದ್ ಸಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಆನಂದ್ ಸಿಂಗ್ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ ಎಂದು ಉತ್ತರಿಸಿದರು.