ETV Bharat / city

ಪಕ್ಷದ ಸೋಲು-ಗೆಲುವಿಗೆ ಕಾರ್ಯಕರ್ತರೇ ಕಾರಣ : ಸಚಿವ ಕೆ ಎಸ್ ಈಶ್ವರಪ್ಪ - ಕಾಂಗ್ರೆಸ್​ ವಿರುದ್ದ ಈಶ್ವರಪ್ಪ ಆಕ್ರೋಶ

ಪಕ್ಷದ ಸೋಲು-ಗೆಲುವಿಗೆ ಕಾರ್ಯಕರ್ತರೇ ಕಾರಣ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

minister ks eshwarappa
ಸಚಿವ ಕೆ.ಎಸ್.ಈಶ್ವರಪ್ಪ
author img

By

Published : Dec 15, 2021, 12:27 PM IST

ಬೆಳಗಾವಿ : ವಿಧಾನ ಪರಿಷತ್​​ ಚುನಾವಣೆಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಬಿಜೆಪಿ ಪಕ್ಷದ ಸೋಲಿಗೆ ಕಾರ್ಯಕರ್ತರೇ ಹೊಣೆ ಹೊರಬೇಕು. ಸೋಲು ಗೆಲುವಿಗೆ ಕಾರ್ಯಕರ್ತರೇ ನೇರ ಕಾರಣ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದರು.

ಚುನಾವಣೆ ಫಲಿತಾಂಶದ ಬಗ್ಗೆ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿರುವುದು..

ಕಾಂಗ್ರೆಸ್​ಗೆ ಸವಾಲು : ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸೋಲು-ಗೆಲುವಿಗೆ ಕಾರ್ಯಕರ್ತರೇ ಕಾರಣ. ಮುಖಂಡರು ರಾಜ್ಯಾದ್ಯಂತ ಓಡಾಡಬೇಕಲ್ವಾ?. ಬಿಜೆಪಿ ಆರರಿಂದ ಹನ್ನೊಂದು ಸ್ಥಾನಕ್ಕೇರಿದ್ದೇವೆ. ಕಾಂಗ್ರೆಸ್ 2, ಜೆಡಿಎಸ್​ನಿಂದ 3 ಸ್ಥಾನ ಕಸಿದುಕೊಂಡು ಗೆದ್ದಿದ್ದೇವೆ.

ಸೋತರು ಮೀಸೆ ಮಣ್ಣಾಗಿಲ್ಲ ಅಂತಾರೆ ಕಾಂಗ್ರೆಸ್‌ನವರು. ಸೋತ್ರು ನಾವೇ ಗೆದ್ದಿದ್ದೇವೆ ಎನ್ನೋದು ಎಷ್ಟು ಸರಿ. ಬಿಜೆಪಿ ಪೂರ್ಣ ಬಹುಮತಕ್ಕೆ ಹೆಜ್ಜೆ ಇಡುತ್ತಿದೆ. ಇದನ್ನು ಶಕ್ತಿ ಇದ್ರೆ ಕಾಂಗ್ರೆಸ್ ತಡೆಯಲಿ ನೋಡೋಣ ಎಂದು ಸವಾಲು ಹಾಕಿದರು.

ಕಾಂಗ್ರೆಸ್​ನದ್ದು ಬಂಡತನದ ಹೇಳಿಕೆ : ಮೇಲ್ಮನೆಯಲ್ಲಿ ಬಹುಮತ ಬಂದ್ರೆ ಎಲ್ಲ ಬಿಲ್ ಪಾಸಾಗೋದಕ್ಕೆ ಅನುಕೂಲವಾಗುತ್ತದೆ. ಈ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ಕಾಂಗ್ರೆಸ್ ಬಂಡತನದ ಹೇಳಿಕೆ ನೀಡುತ್ತಿದೆ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ವಿರುದ್ಧ ಆಕ್ರೋಶ : ಲಖನ್ ಅವರನ್ನು ಬಿಜೆಪಿ ಸೇರಿಸಿಕೊಳ್ಳುವ ಬಗ್ಗೆ ಮುಂದೆ ಚರ್ಚೆ ಮಾಡೋಣ. ಧಮ್ ತೋರಿಸೋದು ಚುನಾವಣೆಯಲ್ಲಿ ಅಲ್ಲ. ಜನರ ಮನಸೋ ಗೆಲ್ಲೋ ವಿಚಾರದಲ್ಲಿ ತೋರಿಸಬೇಕು. ಅತಿ ಹೆಚ್ಚು ಗ್ರಾಮ ಪಂಚಾಯತ್‌ ಗೆದ್ದಿದ್ದೇವೆ. ಲೋಕಸಭಾ ಗೆದ್ದಿದ್ದೇವೆ ಇದು ಯಾರ ಧಮ್?. ಈ ರೀತಿಯ ಪದಗಳನ್ನು ಸಿದ್ದರಾಮಯ್ಯ ಬಳಸಬಾರದು ಎಂದು ಕಿಡಿ ಕಾರಿದರು.

ಕಾಂಗ್ರೆಸ್​​ನವರು ಯಾರು?: ಮತಾಂತರ ಕಾಯ್ದೆ ಪ್ರಶ್ನೆ ಮಾಡಲು ಕಾಂಗ್ರೆಸ್​​ನವರು ಯಾರು?. ಕಾಯ್ದೆ ತಂದೇ ತರುತ್ತೇವೆ. ನಮ್ಮದೇ ಸರ್ಕಾರ ಇದೆ. ವಿರೋಧ ಪಕ್ಷದಲ್ಲಿ ಇರೋದ್ರಿಂದ ಮಾತ್ರ ಅವರು ವಿರೋಧಿಸುತ್ತಾರೆ. ನಮ್ಮ ಧರ್ಮ ಉಳಿಸೋದಕ್ಕಾಗಿ ಕಾಯ್ದೆ ಜಾರಿ ಅನಿವಾರ್ಯ. ಪಾಕಿಸ್ತಾನದಲ್ಲಿ ಆದಂತೆ ಆಗಲು ಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿಗೆ ಟಾನಿಕ್ ನೀಡಿದ ಪರಿಷತ್ ಫಲಿತಾಂಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.