ಬೆಳಗಾವಿ: ಕಳೆದ ರಾತ್ರಿ ನಗರದಲ್ಲಿ ಹೋಟೆಲ್ ಮತ್ತು ಸೌಹಾರ್ದ ಬ್ಯಾಂಕ್ ಮೇಲೂ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಕಲ್ಲು ತೂರಾಟ ನಡೆಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಬಾಪಟ್ ಗಲ್ಲಿ ಕಾರ್ನರ್ ಬಳಿ ಇರುವ ಹೋಟೆಲ್ ಮೇಲೆ ಎಂಇಎಸ್ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕೋರೆ ಗಲ್ಲಿಯಲ್ಲಿನ ಸೌಹಾರ್ದ ಬ್ಯಾಂಕ್ ಮೇಲೆ ಕಲ್ಲು ತೂರಿ ಪುಂಡರು ಉದ್ಧಟತನ ಪ್ರದರ್ಶನ ಮಾಡಿದ್ದಾರೆ. ಇದೇ ವೇಳೆ ಕನ್ನಡ ಬೋರ್ಡ್ ಹರಿದು ದುಷ್ಕರ್ಮಿಗಳು ಪುಂಡಾಟ ಮೆರೆದಿದ್ದಾರೆ.
ಬೆಳಗಾವಿಯಲ್ಲಿ ಪರಿಸ್ಥಿತಿ ಕೈ ಮೀರುತ್ತಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. 144 ಸೆಕ್ಷನ್ ಜಾರಿಯಲ್ಲಿದ್ದರೂ ಎಂಇಎಸ್ ಕಾರ್ಯಕರ್ತರು ಪೊಲೀಸರಿಗೆ ಹೆದರುತ್ತಿಲ್ಲ. ಶಿವಾಜಿ ಉದ್ಯಾನವನದಿಂದ ಡಿಸಿ ಕಚೇರಿವರೆಗೆ ಕಾರ್ಯಕರ್ತರು ಪಾದಯತ್ರೆ ಆರಂಭಿಸಿದ್ದಾರೆ.