ETV Bharat / city

ಬೆಳಗಾವಿಯಲ್ಲಿ MES ಉದ್ಧಟತನ: ಮಹಾಮೇಳ ವೇದಿಕೆ ತೆರವು ಮಾಡದಂತೆ ಪಾಲಿಕೆ ಸಿಬ್ಬಂದಿಗೆ ಎಚ್ಚರಿಕೆ - ಎಂಇಎಸ್​​ ವಾರ್ನಿಂಗ್​

ಬೆಳಗಾವಿಯಲ್ಲಿ ಎಂಇಎಸ್ ಉದ್ಧಟತನ ಮುಂದುವರಿಸಿದೆ. ರಾತ್ರೋರಾತ್ರಿ ಅನುಮತಿ ಇಲ್ಲದಿದ್ದರೂ ಕೆಲವರು ನಡು ರಸ್ತೆಯಲ್ಲಿ ಮಹಾಮೇಳ ವೇದಿಕೆಯನ್ನು ನಿರ್ಮಿಸಿದ್ದಾರೆ. ಈ ಹಿನ್ನೆಲೆ ವೇದಿಕೆ ತೆರವು ಮಾಡಲು ಬಂದ ಪಾಲಿಕೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

MES activist warns to corporation staff
ಮಹಾಮೇಳ ವೇದಿಕೆ ತೆರವು ಮಾಡದಂತೆ ಪಾಲಿಕೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಎಂಇಎಸ್​
author img

By

Published : Dec 13, 2021, 11:48 AM IST

ಬೆಳಗಾವಿ: ಜಿಲ್ಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)​​ ಕಾರ್ಯಕರ್ತರ ಉದ್ಧಟತನ ಮುಂದುವರೆದಿದ್ದು, ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಮಹಾಮೇಳ ಆಯೋಜಿಸಿದ್ದಾರೆ.

ಮಹಾಮೇಳ ವೇದಿಕೆ ತೆರವು ಮಾಡದಂತೆ ಪಾಲಿಕೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಎಂಇಎಸ್​

ನಡು ರಸ್ತೆಯಲ್ಲಿ ಹಾಕಿದ್ದ ಮಹಾಮೇಳ ವೇದಿಕೆ ತೆರವು ಮಾಡಲು ಬಂದ ಪಾಲಿಕೆ ಸಿಬ್ಬಂದಿಗೆ ವೇದಿಕೆ ತೆರವುಗೊಳಿಸಿದಂತೆ ಎಂಇಎಸ್​​ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಸುವರ್ಣ ಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಈ ಹಿನ್ನೆಲೆ ಎಂಇಎಸ್ ರಾತ್ರೋರಾತ್ರಿ ಮಹಾಮೇಳ ವೇದಿಕೆ ನಿರ್ಮಿಸಿದೆ. ಅನುಮತಿ ಇಲ್ಲದಿದ್ದರೂ ಮುಖಂಡರು ವೇದಿಕೆಯನ್ನು ನಿರ್ಮಿಸಿದ್ದಾರೆ. ಈ ವೇದಿಕೆ ತೆರವು ಮಾಡಲು ಬಂದ ಪಾಲಿಕೆ ಸಿಬ್ಬಂದಿಗೆ 'ಮಹಾಮೇಳ ವೇದಿಕೆ' ತೆಗೆದು ನೋಡಿ ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗ್ತಿದೆ.

ಎಂಇಎಸ್​​ ವಿರುದ್ಧ ಕಠಿಣ ಕ್ರಮ ಜರುಗಿಸಲು ಸರ್ಕಾರ ಹಿಂದೇಟು ಹಾಕಿದ್ದು, ಬೆಳಗಾವಿ ವ್ಯಾಕ್ಸಿನ್ ಡಿಪೋ ಮೈದಾನದ ಬಳಿಯ ರಸ್ತೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: ಸುವರ್ಣಸೌಧದವರೆಗೆ ಪಾದಯಾತ್ರೆ.. ಭಜನಾ ತಂಡದ ಜತೆ ನೃತ್ಯ ಮಾಡಿದ ಶಾಸಕಿ ನಿಂಬಾಳ್ಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.