ETV Bharat / city

ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ನಿಂತಿಲ್ಲ: ತೋಂಟದ ಸಿದ್ಧರಾಮ ಶ್ರೀ - ಲಿಂಗಾಯತ ಧರ್ಮ

ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ಎಲ್ಲಾ ಸಮುದಾಯಗಳು ಮೀಸಲಾತಿ ಕೇಳುವುದು ಅವರ ಹಕ್ಕು. ಅದಕ್ಕೆ ನಮ್ಮ ವಿರೋಧ ಇಲ್ಲ. ಆದ್ರೆ, ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕಲ್ಲಿ, ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಗಳಿಗೂ ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಅನುಕೂಲ ಆಗಲಿದೆ ಎಂದು ತೋಂಡದಾರ್ಯ ಮಠದ ಶ್ರೀ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿಗಳು ಹೇಳಿದರು.

lingayata caste protest did not stop yet
ಲಿಂಗಾಯತ ಸ್ವತಂತ್ರ ಧರ್ಮ
author img

By

Published : Feb 19, 2021, 4:57 PM IST

ಬೆಳಗಾವಿ: ಲಿಂಗಾಯತ ಧರ್ಮದ ಅಸ್ಮಿತೆಗಾಗಿ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಅನಿವಾರ್ಯ ಎಂದು ಗದಗ ಡಂಬಳ ತೋಂಟದಾರ್ಯ ಮಠದ ಶ್ರೀ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ.

ನಗರದ ನಾಗನೂರು ರುದ್ರಾಕ್ಷಿ ಮಠದ ಎಸ್‍ಜಿಬಿಐಟಿ ಸಭಾಭವನದಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ಎಲ್ಲಾ ಸಮುದಾಯಗಳು ಮೀಸಲಾತಿ ಕೇಳುವುದು ಅವರ ಹಕ್ಕು. ಅದಕ್ಕೆ ನಮ್ಮ ವಿರೋಧ ಇಲ್ಲ. ಆದ್ರೆ, ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕಲ್ಲಿ, ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಗಳಿಗೂ ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಅನುಕೂಲ ಆಗಲಿದೆ ಎಂದು ಹೇಳಿದರು.

ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ನಿಂತಿಲ್ಲ

ವಿರಶೈವರು ನಮ್ಮ ಬಂಧುಗಳೇ

ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ನಿಂತಿಲ್ಲ. ಕೊರೊನಾ ಹಿನ್ನೆಲೆ ಸ್ವಲ್ಪ ಕಾಲ ನಿಂತಿತ್ತು. ಆದ್ರೆ ಮತ್ತೆ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಇನ್ನು ಸರ್ಕಾರದ ಗೆಜೆಟ್‍ನಲ್ಲಿ ಲಿಂಗಾಯತ ಧರ್ಮಗಳಲ್ಲಿ ವೀರಶೈವ ಕೂಡ ಒಂದು ಒಳಪಂಗಡ ಎಂಬುದನ್ನು ಉಲ್ಲೇಖಿಸಿದೆ. ಲಿಂಗಾಯತರು ಯಾರನ್ನೂ ದ್ವೇಷಿಸಬಾರದು. ವೀರಶೈವರೂ ಕೂಡ ನಮ್ಮ ಬಂಧುಗಳೇ. ಆದರೆ ಲಿಂಗಾಯತ ಧರ್ಮದ ತತ್ವಗಳ ವಿಚಾರವನ್ನು ಅವರಿಗೆ ಮನದಟ್ಟು ಮಾಡುವ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಜಾಗತಿಕ ಲಿಂಗಾಯತ ಮಹಾಸಭಾ ಮಾಡಬೇಕು ಎಂದು ಕರೆ ನೀಡಿದರು.

20 ಸಾವಿರ ವಚನಗಳ ಬಗ್ಗೆ ಯಾರಿಗೂ ಗೊತ್ತಿಲ್ಲ

ನಿವೃತ್ತ ಐಎಎಸ್ ಅಧಿಕಾರಿ, ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ್ ಮಾತನಾಡಿ, 1520ರಿಂದ 1620ವರೆಗೂ ಸುಮಾರು ಆರು ಶೂನ್ಯ ಸಂಪಾದನಾ ಕೃತಿಗಳು ರಚನೆಯಾದವು. ಆ ವೇಳೆ ಲಭ್ಯವಿದ್ದ 2041 ವಚನಗಳನ್ನು ನಾಟಕಗಳ ಮೂಲಕ ರೂಪಾಂತರ ಮಾಡಿ ಜನರಿಗೆ ಪ್ರಚುರಪಡಿಸುತ್ತಿದ್ದರು. ಆದರೆ ಉಳಿದ 20 ಸಾವಿರ ವಚನಗಳ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. 1920ರ ನಂತರ ಫ.ಗು.ಹಳಕಟ್ಟಿ ಅವರು ವಚನಗಳನ್ನು ಸಂಶೋಧನೆ ಮಾಡಿ ವಚನ ಧರ್ಮ ಸಾರ ಗ್ರಂಥ ರಚಿಸಿ ಲಿಂಗಾಯತ ಧರ್ಮ ಮನೆ ಮಾತಾಗುವಂತೆ ಮಾಡಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.