ETV Bharat / city

ಬೇಲಿ ಹಾರಿಯಾದರೂ ಸುವರ್ಣ ಸೌಧಕ್ಕೆ ಮುತ್ತಿಗೆ: ಸರ್ಕಾರಕ್ಕೆ ಗಡುವು ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್​

ರೈತರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ನಾವು ಬೆಳಗ್ಗೆ 11 ಗಂಟೆಯಿಂದ ಕೊಂಡುಕೊಪ್ಪದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ ಕೂಡಲೇ ಸ್ಥಳಕ್ಕೆ ಬಂದು ನಮ್ಮ ಜತೆಗೆ ಮಾತನಾಡಬೇಕು ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​​ ಆಗ್ರಹಿಸಿದ್ದಾರೆ.

Kodihalli Chandrashekar warns to state govt
ಸರ್ಕಾರಕ್ಕೆ ಗಡುವು ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್​
author img

By

Published : Dec 13, 2021, 2:09 PM IST

ಬೆಳಗಾವಿ: ಕೇಂದ್ರದಂತೆ ರಾಜ್ಯ ಸರ್ಕಾರ ಕೂಡ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವ ಬಗ್ಗೆ ಇಂದು ಮಧ್ಯಾಹ್ನ 2.30ರೊಳಗೆ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ ಬೇಲಿ ಹಾರಿಯಾದರೂ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​​ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸರ್ಕಾರಕ್ಕೆ ಗಡುವು ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್​

ಬೆಳಗಾವಿಯ ಸುವರ್ಣಸೌಧ ಎದುರಿರುವ ಕೊಂಡುಸಕೊಪ್ಪದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ನಾವು ಬೆಳಗ್ಗೆ 11 ಗಂಟೆಯಿಂದ ಕೊಂಡುಕೊಪ್ಪದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ ಕೂಡಲೇ ಸ್ಥಳಕ್ಕೆ ಬಂದು ನಮ್ಮ ಜತೆಗೆ ಮಾತನಾಡಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಪ್ರತಿನಿಧಿಗಳು ಇಲ್ಲಿಗೆ ಬರದಿದ್ದರೆ ನಾವೂ ಬೇಲಿ ಹಾರಿಯಾದರೂ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ನಮ್ಮನ್ನು ಯಾರು ತಡೆಯುತ್ತಾರೆ ನೋಡುತ್ತೇವೆ. ಪೊಲೀಸರ ಕಣ್ಣು ತಪ್ಪಿಸಿ ಸುವರ್ಣ ಸೌಧಕ್ಕೆ ಹೋಗಲೇಬೇಕು. ನಾವು ಇಲ್ಲಿ ಹರಿಕಥೆ ಕೇಳಲು ಬಂದಿಲ್ಲ, ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್​​ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಣಗುಡುತ್ತಿದೆ ವಿಧಾನಸಭೆ, ವಿಧಾನ ಪರಿಷತ್ : ಬೆಳಗಾವಿ ಅಧಿವೇಶನಕ್ಕೆ ಸದಸ್ಯರ ನಿರಾಸಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.