ETV Bharat / city

ಸಿಎಂ ಬೂಟ್ ಪಾಲಿಶ್ ಮಾಡಲು ಬಂದಿದ್ದ ಕರವೇ ಕಾರ್ಯಕರ್ತರು: ವಿಟಿಯು ಬಳಿ ಬಿಗಿ ಪೊಲೀಸ್ ಬಂದೋಬಸ್ತ್

author img

By

Published : Dec 16, 2021, 10:33 AM IST

ಬಾಗಲಕೋಟೆ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಕರವೇ ಕಾರ್ಯಕರ್ತರು ಸಿಎಂ ತಂಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಕಾರ್ಯಕರ್ತರು ಜಮಾವಣೆಯಾಗುತ್ತಿದ್ದಂತೆ, ವಿಟಿಯು ಗೇಟ್ ಬಳಿ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

Karave activists tries to siege of CM Basavaraj Bommai
ಸಿಎಂ ಬೂಟ್ ಪಾಲಿಶ್ ಮಾಡಲು ಬಂದಿದ್ದ ಕರವೇ ಕಾರ್ಯಕರ್ತರು

ಬೆಳಗಾವಿ: ಬಾಗಲಕೋಟೆ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಸಿಎಂ ತಂಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ಗೆ ಮುತ್ತಿಗೆ ಹಾಕಿ, ಸಿಎಂ ಬೊಮ್ಮಾಯಿಯವರ ಬೂಟ್ ಪಾಲಿಶ್ ಮಾಡಲು ಬಂದಿದ್ದರು. ಇದನ್ನು ಗಮನಿಸಿದ ಭದ್ರತಾ ಪೊಲೀಸರು ಸಿಎಂ ಬೂಟ್ ಪಾಲಿಶ್​ ಮಾಡಲು ತಂದಿದ್ದ ಪಾಲಿಶ್ ಪೆಟ್ಟಿಗೆಯನ್ನು ವಶಕ್ಕೆ ಪಡೆದಿದ್ದಾರೆ.

ಸಿಎಂ ಬೂಟ್ ಪಾಲಿಶ್ ಮಾಡಲು ಬಂದಿದ್ದ ಕರವೇ ಕಾರ್ಯಕರ್ತರು..

ತಾಲೂಕಿನ ಮಚ್ಚೆಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಂಗಿದ್ದಾರೆ. ಹೀಗಾಗಿ ಬಾಗಲಕೋಟೆಯಿಂದ ಆಗಮಿಸಿದ ಕರವೇ ಕಾರ್ಯಕರ್ತರು ಸಿಎಂ ಭೇಟಿಗೆ ಅವಕಾಶ ಕೊಡುವಂತೆ ಮನವಿ ಮಾಡಿಕೊಂಡರು. ಆದ್ರೆ, ಇದ್ಯಾವುದಕ್ಕೂ ಕ್ಯಾರೆ ಎನ್ನದ ಭದ್ರತಾ ಪೊಲೀಸರು ಸಿಎಂ‌ ಭೇಟಿಗೆ ನಿರಾಕರಿಸಿದರು.

ಇದೇ ವೇಳೆ ಬಾಲಗಕೋಟೆ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಕರವೇ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಬಾಗಲಕೋಟೆ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಒತ್ತಾಯಿಸಿದರು. ಕರವೇ ಕಾರ್ಯಕರ್ತರು ಜಮಾವಣೆಯಾಗುತ್ತಿದ್ದಂತೆ, ವಿಟಿಯು ಗೇಟ್ ಬಳಿ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

ಇತ್ತ ಭಾರತ 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ದದಲ್ಲಿ ಜಯಸಾಧಿಸಿ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯ ಮರಾಠಿ ಲಘು ಪದಾತಿ ದಳ ಕೇಂದ್ರ(ಎಂಎಲ್ಐಆರ್​​ಸಿ)ದಲ್ಲಿ "ವಿಜಯ ದಿವಸ" ಆಚರಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದ್ರೆ, ಕರವೇ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ 1 ಗಂಟೆ ಕಾಲ ಕಾರ್ಯಕ್ರಮ ತಡವಾಗಿದೆ.

ಇದನ್ನೂ ಓದಿ: ಹನುಮ ಮಾಲಾಧಾರಿಗಳ ಬಸ್ ತಡೆದ ಪೊಲೀಸರು: ನಿಷೇಧದ ನಡುವೆಯೂ ಅಂಜನಾದ್ರಿಯಲ್ಲಿ ಮಾಲಾ ವಿಸರ್ಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.