ETV Bharat / city

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್.. 23ರಂದು ಬೆಳಗಾವಿಯಲ್ಲಿ ಉದ್ಯೋಗ ಮೇಳ, 40ಕ್ಕೂ ಹೆಚ್ಚು ಕಂಪನಿಗಳು ಭಾಗಿ - skill connect kaushalkar

ಡಿ.23ರಂದು ಮೊದಲ ಸುತ್ತಿನ ಸಂದರ್ಶನದಲ್ಲಿ ಆಯ್ಕೆಯಾದವರಿಗೆ ಮರುದಿನ, ಅಂದರೆ 24ರಂದು ಅಂತಿಮ ಸುತ್ತಿನ ಸಂದರ್ಶನ ಇರುತ್ತದೆ. ಸಂದರ್ಶನದಲ್ಲಿ ವಿಫಲರಾಗುವ ಅಭ್ಯರ್ಥಿಗಳಿಗೆ ಸರ್ಕಾರದ ವತಿಯಿಂದಲೇ ಅಗತ್ಯ ಕೌಶಲ್ಯಗಳನ್ನು ಒದಗಿಸಿ, ಮುಂಬರುವ ದಿನಗಳಲ್ಲಿ ಅವರೆಲ್ಲ ಉದ್ಯೋಗಕ್ಕೆ ಅರ್ಹರಾಗುವಂತೆ ಮಾಡಲಾಗುವುದು..

job-fair-in-belagavi
ಬೆಳಗಾವಿಯಲ್ಲಿ ಉದ್ಯೋಗ ಮೇಳ
author img

By

Published : Dec 21, 2021, 7:32 PM IST

Updated : Dec 21, 2021, 7:47 PM IST

ಬೆಳಗಾವಿ : ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮವು ಡಿ.23ರ ಗುರುವಾರದಂದು ನಗರದ ಉದ್ಯಮ್ ಬಾಗ್​ನಲ್ಲಿರುವ ಗೋಗಟೆ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಂಡಿದೆ ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ. ಎನ್​. ಅಶ್ವತ್ಥ್‌ ನಾರಾಯಣ ತಿಳಿಸಿದರು.

ಡಿ.23ಕ್ಕೆ ಬೆಳಗಾವಿಯಲ್ಲಿ ಉದ್ಯೋಗ ಮೇಳ ಆಯೋಜಿಸಿರುವ ಕುರಿತಂತೆ ಸಚಿವ ಅಶ್ವತ್ಥ್ ನಾರಾಯಣ ಮಾಹಿತಿ ನೀಡಿರುವುದು..

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.23ರ ಬೆಳಗ್ಗೆ 9ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ. ಬಿ.ಇ., ಬಿ.ಟೆಕ್, ಎಂ.ಟೆಕ್, ಡಿಪ್ಲೊಮಾ ಮತ್ತು ಐಟಿಐ ಪದವೀಧರರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.

ಬೇಕಾದ ದಾಖಲೆಗಳು : ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರ, ಅಂಕಪಟ್ಟಿ ಮತ್ತು ಇವುಗಳ ನಕಲು ಪ್ರತಿ, ಎರಡು ಭಾವಚಿತ್ರಗಳು ಮತ್ತು ಕನಿಷ್ಠಪಕ್ಷ 5 ರೆಸ್ಯೂಮ್​ಗಳೊಂದಿಗೆ ಹಾಜರಾಗಬೇಕು. ಮೇಳದಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿಸಿದರು.

job-fair-in-belagavi
ಉದ್ಯೋಗ ಮೇಳ

ಹೆಸರಾಂತ ಕಂಪನಿಗಳು ಭಾಗಿ : ಮೇಳದಲ್ಲಿ ಹೆಸರಾಂತ ಕಂಪನಿಗಳಾದ ಟಿಸಿಎಸ್, ವಿಪ್ರೊ, ಹೆಚ್‌ಸಿಎಲ್, ಬೈಜೂಸ್, ಹೆಚ್‌ಪಿ, ನಾರಾಯಣ ಗ್ರೂಪ್, ಯುಟಿಎಲ್, ಓಲಾ, ಟಾಟಾ ಕಮ್ಯುನಿಕೇಷನ್ಸ್, ಟಾಟಾ ಬ್ಯುಜಿನೆಸ್ ಹಬ್ ಲಿ., ಜಾಸ್ಮೀನ್ ಇನ್ಫೋಟೆಕ್, ಟೊಯೊಟಾ ಸೇರಿದಂತೆ 40ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ.

23ರಂದು ಮೊದಲ ಸುತ್ತಿನ ಸಂದರ್ಶನದಲ್ಲಿ ಆಯ್ಕೆಯಾದವರಿಗೆ ಮರುದಿನ, ಅಂದರೆ 24ರಂದು ಅಂತಿಮ ಸುತ್ತಿನ ಸಂದರ್ಶನ ಇರುತ್ತದೆ. ಸಂದರ್ಶನದಲ್ಲಿ ವಿಫಲರಾಗುವ ಅಭ್ಯರ್ಥಿಗಳಿಗೆ ಸರ್ಕಾರದ ವತಿಯಿಂದಲೇ ಅಗತ್ಯ ಕೌಶಲ್ಯಗಳನ್ನು ಒದಗಿಸಿ, ಮುಂಬರುವ ದಿನಗಳಲ್ಲಿ ಅವರೆಲ್ಲ ಉದ್ಯೋಗಕ್ಕೆ ಅರ್ಹರಾಗುವಂತೆ ಮಾಡಲಾಗುವುದು ಎಂದರು.

ಹೆಸರು ನೋಂದಾವಣೆ : ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು 'ಸ್ಕಿಲ್​ ಕನೆಕ್ಟ್​​​​ ಕೌಶಲ್ಕರ್' (skill connect kaushalkar) ವೆಬ್‌ಸೈಟ್​​ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು, ksdc.recruitment@gmail.com ಮೇಲ್​ಗೆ ತಮ್ಮ ಸ್ವವಿವರಗಳನ್ನು ಕಳುಹಿಸಿ ಕೊಡಬೇಕು. ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 8277895931 ಅನ್ನು ಸಂಪರ್ಕಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.

Last Updated : Dec 21, 2021, 7:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.