ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಕರಜಗಾ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಒಬ್ಬನನ್ನ ಬಂಧಿಸಲಾಗಿದೆ.
ಕರಜಗಾ ಗ್ರಾಮದ ಫಕ್ರುದ್ದೀನ್ ಸೋಲಾಪೂರೆ ಬಂಧಿತ ಆರೋಪಿ. ಈತ ಕರಜಗಾ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಂಕೇಶ್ವರ ಪೊಲೀಸರು, ಆರೋಪಿಯನ್ನ ಬಂಧಿಸಿದ್ದಾರೆ.
ಅಲ್ಲದೇ ,ಆತನ ಬಳಿ ದೇಶಿದಾರು ಅಂತ ಪ್ರಿಂಟ್ ಇದ್ದ 90 ಎಂಎಲ್ನ 155 ಪ್ಲಾಸ್ಟಿಕ್ ಬಾಟಲ್ಗಳು ಸೇರಿ ಮದ್ಯವನ್ನ ವಶಕ್ಕೆ ಪಡೆಯಲಾಗಿದೆ.