ಬೆಳಗಾವಿ: ಪತ್ನಿ ಆರೋಪ, ಕೌಟುಂಬಿಕ ಕಲಹವೆಲ್ಲವೂ ಪ್ರೀತಿಯಿಂದಲೇ ಬಗೆಹರಿಯುತ್ತದೆ. ಕುಂದಾನಗರಿ ಕಂದ ನನ್ನ ಪತ್ನಿ. ಒಳ್ಳೆಯ ಹುಡುಗಿಯೂ ಹೌದು ಎಂದು ಕೆ. ಕಲ್ಯಾಣ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪ-ಪ್ರತ್ಯಾರೋಪ ಬಗ್ಗೆ ನಾನು ಇಲ್ಲಿ ಮಾತನಾಡಲ್ಲ. ಮಾತನಾಡಿದ್ರೆ ಅಪೂರ್ಣವಾಗುತ್ತದೆ. ಭಾನುವಾರ ಸುದ್ದಿಗೋಷ್ಠಿ ನಡೆಸಿ ಎಲ್ಲದಕ್ಕೂ ಉತ್ತರಿಸುತ್ತೇನೆ. ನಿಮ್ಮ ಒಂದು ಪ್ರಶ್ನೆಗೆ ನಾಲ್ಕು ಪುಟಗಳ ಉತ್ತರವಾಗಲಿದೆ. ನಿಜವಾಗಲೂ ಪ್ರೀತಿಸಿ ಮದುವೆಯಾದವರು ನೆನಪಿಸಿಕೊಂಡರೆ ಎದೆಯಲ್ಲಿ ಗಂಟೆ ಹೊಡೆಯುತ್ತೆ. ಅದರ ಅನುಭವ ಇದ್ದವರಿಗೆ ಮಾತ್ರ ಗೊತ್ತಾಗುತ್ತದೆ ಎಂದರು.
ನನ್ನ ಹೆಂಡತಿ ಸ್ವಲ್ಪ ಮೆಚ್ಯೂರ್ ಆಗಿ ಯೋಚಿಸಬೇಕಿತ್ರು. ನಾನು, ನನ್ನ ಪತ್ನಿ ಕುಂದಾನಗರಿಯಲ್ಲೇ ಇದ್ದೇವೆ. ಇಬ್ಬರು ಒಟ್ಟಿಗೆ ಕುಳಿತು ಹಾಡು ಬರೆದು, ಸ್ಪಾಟಲ್ಲೇ ಕಾಂಪೋಸ್ ಮಾಡ್ತೀನಿ. ಆ ಹಾಡನ್ನು ನನ್ನ ಹೆಂಡತಿ ಕಡೆಯಿಂದಲೇ ಹಾಡಿಸುತ್ತೇನೆ. ಎಲ್ಲವೂ ಸುಖಾಂತ್ಯ ವಾಗಲಿದೆ. ಇದೇ ಸತ್ಯ ಕೂಡ. ಕೃತಕತೆ, ಅಡ್ಡದಾರಿ ಯಾವುದು ಉಳಿಯಲ್ಲ. ನಿಜವಾದ ಪ್ರೀತಿಯೇ ಉಳಿಯೋದು, ಗೆಲ್ಲೋದು ಕೂಡ ಎಂದರು.