ETV Bharat / city

ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ ಕೋರಿದ ಗ್ರಾಮಸ್ಥರು.. 18 ವರ್ಷಗಳ ದೇಶಸೇವೆಗೆ ಸನ್ಮಾನ - ಭಾರತೀಯ ಸೇನೆಯಲ್ಲಿ ಸೇವೆ

ಯೋಧರ ಸಾರ್ಥಕ ಸೇವೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಉಡುಗೊರೆ, ಹೂಗುಚ್ಛ ನೀಡುವ ಜೊತೆಗೆ ಆರತಿ ಬೆಳಗಿ ಯೋಧರನ್ನು ಬರಮಾಡಿಕೊಳ್ಳಲಾಯಿತು.

grand-welcome-to-retired-soldiers
ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ ಕೋರಿದ ಗ್ರಾಮಸ್ಥರು
author img

By

Published : Apr 3, 2022, 5:19 PM IST

ಅಥಣಿ(ಬೆಳಗಾವಿ): ಭಾರತೀಯ ಸೇನೆಯಲ್ಲಿ ಬರೋಬ್ಬರಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ಸ್ವಗ್ರಾಮಕ್ಕೆ ಮರಳಿದ ಮೂವರು ಯೋಧರಾದ ಕಾಶಿನಾಥ ಗುರವ, ಬಸಪ್ಪ ಹಳ್ಳದಮಳ, ಮಹೇಶ ಹೊಸಟ್ಟಿ ಅವರನ್ನು ತಾಲೂಕಿನ ಮಾಜಿ ಸೈನಿಕರ ಸಂಘ ಹಾಗೂ ಅಥಣಿ ಜನತೆ ಅದ್ಧೂರಿ ಸ್ವಾಗತದ ಮೂಲಕ ಬರಮಾಡಿಕೊಂಡರು.

ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ ಕೋರಿದ ಗ್ರಾಮಸ್ಥರು

ಸ್ಥಳೀಯ ಗಚ್ಚಿನಮಠದಲ್ಲಿ ಮಾಜಿ ಸೈನಿಕರನ್ನು ಗ್ರಾಮಸ್ಥರು ಸನ್ಮಾನಿಸಿದರು. ಉಡುಗೊರೆ, ಹೂಗುಚ್ಛ ನೀಡುವ ಜೊತೆಗೆ ಆರತಿ ಬೆಳಗಿ ಯೋಧರನ್ನು ಬರಮಾಡಿಕೊಳ್ಳಲಾಯಿತು. ಯೋಧರ ಸಾರ್ಥಕ ಸೇವೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಯೋಧ ಬಸಪ್ಪ ಹಳ್ಳದಮಳ ಮಾತನಾಡಿ, ಕಾಶಿನಾಥ ಗುರವ, ಮಹೇಶ ಹೊಸಟ್ಟಿ ನಾವು ಎಲ್ಲರೂ 18 ವರ್ಷ ದೇಶದ ಸೇವೆಮಾಡಿ ಸ್ವ ಗ್ರಾಮಕ್ಕೆ ಮರಳಿದ್ದೇವೆ. ದೇಶಕ್ಕೆ ದುಡಿದ ಹೆಮ್ಮೆ ಮತ್ತು ಸಾರ್ಥಕ ಭಾವನೆ ನನ್ನಲ್ಲಿದೆ ಎಂದರು.

ನಮ್ಮನ್ನು ಊರಿನಲ್ಲಿ ಸ್ವಾಗತಿಸುವ ಮಾಹಿತಿ ಇತ್ತು. ಆದರೆ ಇಷ್ಟೊಂದು ‌ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡುತ್ತಾರೆ ಎಂಬ ಮಾಹಿತಿ ಇರಲಿಲ್ಲ. ಕಾರ್ಯಕ್ರಮ ನೆರವೇರಿಸಿದ ಮಾಜಿ ಸೈನಿಕರು ಗ್ರಾಮಸ್ಥರು ಹಾಗೂ ಸಂಬಂಧಿಕರಿಗೆ ಆಭಾರಿ ಆಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ನಾನು ಬಿಜೆಪಿ ಸೇರುವುದು ಖಚಿತ, ಈಗಾಗಲೇ ವರಿಷ್ಠರ ಜೊತೆ ಮಾತುಕತೆಯಾಗಿದೆ: ಹೊರಟ್ಟಿ

ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಶಿವಣ್ಣ ಮಾತನಾಡಿ, 3 ಜನ ಯೋಧರು ಇಂದು ತಾಯ್ನಾಡಿಗೆ ಮರಳಿದ್ದಾರೆ. ಅದ್ಧೂರಿಯಾಗಿ ಸ್ವಾಗತಿಸುವ ಕಾರ್ಯಕ್ಕೆ ತಾಲೂಕಿನ ಜನತೆ ಸಾತ್ ನೀಡಿದ್ದಾರೆ. ಯುವಕರು ಭಾರತಾಂಬೆಯ ಸೇವೆ ಮಾಡಲು ಸೇನೆಗೆ ಸೇರಬೇಕೆಂದು ಕರೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.