ಬೆಳಗಾವಿ: ಭ್ರಷ್ಟಾಚಾರದ ವಿಚಾರವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಕಿತ್ತಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಾಗನೂರು ಗ್ರಾ.ಪಂ. ಕಚೇರಿ ಆವರಣದಲ್ಲಿ ನಡೆದಿದೆ.
ಮನೆ, ಜಾಗದ ಉತಾರ ನೀಡಲು 7 ರಿಂದ 8 ಸಾವಿರ ರೂ. ಬೇಡಿಕೆ ಇಡುತ್ತಿರುವ ಆರೋಪ ನಾಗನೂರು ಪಿಡಿಒ ಅವಿನಾಶ್ ಅಂಗರಗಟ್ಟಿ ವಿರುದ್ಧ ಕೇಳಿ ಬಂದಿತ್ತು. ಹಣಕ್ಕೆ ಬೇಡಿಕೆ ಇಡುತ್ತಿರುವುದೇಕೆ ಎಂದು ಗ್ರಾ.ಪಂ. ಸದಸ್ಯ ಬಸವರಾಜ್ ಉಣಕಲ್ ಪ್ರಶ್ನಿಸಿದ್ದಾರೆ. ಇದಕ್ಕೆ ಕುಪಿತಗೊಂಡ ಪಿಡಿಒ ಗ್ರಾ.ಪಂ. ಸದಸ್ಯನಿಗೆ ಕಪಾಳಮೋಕ್ಷ ಮಾಡಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಬಿಜೆಪಿಯವರು ಹಿಂಬಾಗಿಲ ಮೂಲಕ ದೇವಾಲಯಗಳನ್ನು ಒಡೆಯುತ್ತಿದ್ದಾರೆ: ಶಿವರಾಜ ತಂಗಡಗಿ
ಈ ಪ್ರಕರಣ ಸಂಬಂಧ ನೇಸರಗಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ. ಪಿಡಿಒ ಅವಿನಾಶ್ ಅಂಗರಗಟ್ಟಿ ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಗ್ರಾ.ಪಂ. ಸದಸ್ಯ ಬಸವರಾಜ ದೂರು ನೀಡಿದ್ರೆ, ಮತ್ತೊಂದೆಡೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ಗ್ರಾ.ಪಂ. ಸದಸ್ಯನ ವಿರುದ್ಧ ಪಿಡಿಒ ಪ್ರತಿದೂರು ನೀಡಿದ್ದಾರೆ.