ಚಿಕ್ಕೋಡಿ: ಸರ್ಕಾರದ ಅನುದಾನ ಪಡೆಯಲು ಪಟ್ಟಟಣದ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಅರ್ಜಿಯನ್ನ ಸಚಿವರಿಗೆ ಕಳುಹಿಸಲು ಸಾಮಾಜಿಕ ಅಂತರದ ಪರಿವೇ ಇಲ್ಲದೇ ಮುಗಿಬಿದ್ದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಅಂಚೆ ಕಚೇರಿಯಲ್ಲಿ ಸರಕಾರದ ಯಾವುದೇ ಮಾರ್ಗಸೂಚಿ ಇಲ್ಲದೇ ಇದ್ದರೂ, ಸಾರಿಗೆ ಸಚಿವರ ವಿಳಾಸಕ್ಕೆ ಅರ್ಜಿ ಕಳುಹಿಸುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮುಗಿಬಿದ್ದಿರುವುದು ಆತಂಕಕ್ಕೆ ಎಡೆಮಾಡಿದೆ.