ETV Bharat / city

ರಮೇಶ್​ ಜಾರಕಿಹೊಳಿಯ ನಿಗೂಢ ನಡೆ ಕೈ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆಯಾ? - undefined

ಚಿಕ್ಕೋಡಿ ‌ಹಾಗೂ ಬೆಳಗಾವಿಯಲ್ಲಿ ‌ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡದೇ ತಟಸ್ಥವಾಗಿ ಉಳಿದಿರುವ ರಮೇಶ್​ ಜಾರಕಿಹೊಳಿ ಇಂದು ದಿಢೀರ್ ಆಗಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷರಾದರು.

ರಮೇಶ್​ ಜಾರಕಿಹೊಳಿ
author img

By

Published : Apr 11, 2019, 2:10 PM IST

ಬೆಳಗಾವಿ: ಲೋಕಸಭೆ ‌ಚುನಾವಣೆಯಲ್ಲಿ ತಟಸ್ಥವಾಗಿ ಉಳಿದಿರುವ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಇಂದು ದಿಢೀರ್ ಆಗಿ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷರಾದರು.

ಚಿಕ್ಕೋಡಿ ‌ಹಾಗೂ ಬೆಳಗಾವಿಯಲ್ಲಿ ‌ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡದೆ ರಮೇಶ್​ ಜಾರಕಿಹೊಳಿ ತಟಸ್ಥವಾಗಿ ಉಳಿದಿದ್ದಾರೆ. ಗೋಕಾಕ್ ನಿಂದ ರಸ್ತೆ ಮಾರ್ಗವಾಗಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಾಸಕ‌ ರಮೇಶ್​ ಜಾರಕಿಹೊಳಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಶಾಸಕರ ಜತೆಗೆ ಪರಿಷತ್ ‌ಸದಸ್ಯ ವಿವೇಕರಾವ್ ಪಾಟೀಲ್​ ಕೂಡ ಕಾಣಿಸಿಕೊಂಡರು.

ಜಿಲ್ಲೆಯ ಹಿರಿಯ ಕಾಂಗ್ರೆಸ್ ‌ನಾಯಕರಾಗಿರುವ ರಮೇಶ್​ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡ ಬಳಿಕ ಕಾಂಗ್ರೆಸ್ ಜತೆಗೆ ಅಂತರ ಕಾಯ್ದುಕೊಂಡಿದ್ದಾರೆ. ಚುನಾವಣೆ ‌ಸಂದರ್ಭದಲ್ಲಿ ರಮೇಶ್​ ಅನುಸರಿಸುತ್ತಿರುವ ನಿಗೂಢ ನಡೆ ಕೈ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.