ಬೆಳಗಾವಿ: ತಾಲೂಕಿನ ಕಾಕತಿ ರಸ್ತೆಯ ಬರ್ಡೆ ಡಾಬಾ ಮತ್ತು ಯಮನಾಪುರ ಬಳಿಯ ರಸ್ತೆ ಬದಿಯಲ್ಲಿ ಪಿಪಿಇ ಕಿಟ್ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕೋವಿಡ್-19 ವೈರಸ್ನಿಂದ ರಕ್ಷಿಸಿಕೊಳ್ಳಲು ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಪಿಪಿಇ ಕಿಟ್, ಗ್ಲೌಸ್, ಮಾಸ್ಕ್, ಶೂ ಕವರ್ಗಳನ್ನು ಬಳಸುತ್ತಾರೆ. ಹೀಗೆ ಬಳಸಿದ ಪರಿಕರಗಳನ್ನು ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ.
ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಬಿದ್ದಿರುವ ಸುರಕ್ಷಾ ಕಿಟ್ ತೆರವುಗೊಳಿಸಬೇಕಿದೆ.