ETV Bharat / city

ನಾನು ಸಚಿವ ಸ್ಥಾನದ ಆಕಾಂಕ್ಷಿ, ಅವಕಾಶ ಕೊಟ್ಟರೆ ನಿಭಾಯಿಸುತ್ತೇನೆ: ಆನಂದ್ ಮಾಮನಿ

ಅವಕಾಶ ಕೊಟ್ಟರೆ ಸಚಿವ ಸ್ಥಾನ ನಿಭಾಯಿಸಬಲ್ಲೆ. ಅಸಮಾಧಾನ ಅನ್ನೋ ಪ್ರಶ್ನೆಯಿಲ್ಲ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ್ ಮಾಮನಿ ಸ್ಪಷ್ಟಪಡಿಸಿದರು.

Anand Mamani
ಆನಂದ್ ಮಾಮನಿ
author img

By

Published : Dec 13, 2021, 1:09 PM IST

ಬೆಳಗಾವಿ: ಸ್ವಾಭಾವಿಕವಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿ. ಅವಕಾಶ ಕೊಟ್ರೆ ಸಚಿವ ಸ್ಥಾನ ನಿಭಾಯಿಸಬಲ್ಲೆ. ಇಲ್ಲದಿದ್ದರೆ ಇದೇ ರೀತಿ ವಿಧಾನಸಭೆಯ ಉಪ ಸಭಾಧ್ಯಕ್ಷನಾಗಿ ಮುಂದುವರೆಯುತ್ತೇನೆ ಎಂದು ಆನಂದ್ ಮಾಮನಿ ಸ್ಪಷ್ಟಪಡಿಸಿದರು.

ಉಪ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಚಿಂತನೆ ವಿಚಾರವಾಗಿ ಪ್ರತಿಕ್ರಿಯಿಸಿದ ಆನಂದ್ ಮಾಮನಿ

ಬೆಳಗಾವಿ ಸುವರ್ಣಸೌಧದಲ್ಲಿ ಉಪ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಚಿಂತನೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು‌ ಮೂರು ಬಾರಿ ಆಯ್ಕೆಯಾಗಿ ಬಂದವನು. ಉಪಾಧ್ಯಕ್ಷ ಸ್ಥಾನವನ್ನ ಪಕ್ಷ ಕೊಟ್ಟಿದೆ. ಅವಕಾಶ ಕೊಟ್ಟರೆ ಸಚಿವ ಸ್ಥಾನ ನಿಭಾಯಿಸಬಲ್ಲೆ. ಅಸಮಾಧಾನ ಅನ್ನೋ ಪ್ರಶ್ನೆಯಿಲ್ಲ ಎಂದರು.

ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಸಂಪುಟ ವಿಸ್ತರಣೆ ಮಾಡುವುದು ಸಿಎಂಗೆ ಬಿಟ್ಟ ವಿಚಾರ. ರಾಜಕೀಯದಲ್ಲಿ ಯಾರು ಸನ್ಯಾಸಿಗಳಲ್ಲ. ಎಲ್ಲರೂ ಅವಕಾಶಕ್ಕಾಗಿ ಕಾಯುವುದು ಸಹಜ. ನಮ್ಮ ಸರ್ವೋಚ್ಚ ನಾಯಕ ಯಡಿಯೂರಪ್ಪ ಇದ್ದಾರೆ. ಪಕ್ಷದ ಜತೆ ಮುನಿಸಿಕೊಳ್ಳುವುದಿಲ್ಲ. ಸವದತ್ತಿ ಪುರಸಭೆಯಲ್ಲಿ 23 ಅಭ್ಯರ್ಥಿಗಳಿದ್ದಾರೆ. ಅವರನ್ನು ಗೆಲ್ಲಿಸುವ ಕೆಲಸ ಮಾಡುತ್ತೇನೆ ಎಂದು ಮಾಮನಿ ಹೇಳಿದ್ರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಎಂಇಎಸ್​​ ಮುಖಂಡನ ಮುಖಕ್ಕೆ ಮಸಿ ಬಳಿದ ಅಪರಿಚಿತ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.