ಬೆಳಗಾವಿ: ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ಗೆ ಭೇಟಿ ನೀಡಿದ್ದ ಡಿಸಿಎಂ ಲಕ್ಷ್ಮಣ ಸವದಿ ಅಲ್ಲಿನ ಅವ್ಯವಸ್ಥೆ ಕಂಡು ದಿಗಿಲುಗೊಂಡಿದ್ದು, ರೋಗಿಗಳ ಸಮ್ಮುಖದಲ್ಲೇ ಬಿಮ್ಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಸೋಂಕಿತರ ಶವ ಹಸ್ತಾಂತರ ಮಾಡದೇ ಕೋವಿಡ್ ವಾರ್ಡ್ನಲ್ಲೇ ಇರಿಸಲಾಗಿತ್ತು. ಇದನ್ನು ಗಮನಿಸಿದ ಡಿಸಿಎಂ ಸವದಿ, ಬಿಮ್ಸ್ ನಿರ್ದೇಶಕ ಡಾ. ವಿನಯ್ ದಾಸ್ತಿಕೊಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಯಾವ ಭಾಷೆಯಲ್ಲಿ ಹೇಳಬೇಕೋ ತಿಳಿತಿಲ್ಲ: ಸವದಿ ಗರಂ
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ಕೋವಿಡ್ ವಾರ್ಡ್ ಒಳಗಡೆ ಹೋಗಿ ಪರಿಶೀಲನೆ ಮಾಡಿ ಬಂದಿದ್ದೇನೆ. ದಪ್ಪ ಚರ್ಮದ ಅಧಿಕಾರಿಗಳಿಗೆ ಯಾವ ಭಾಷೆಯಲ್ಲಿ ಹೇಳಬೇಕು ಎಂದು ತಿಳಿಯುತ್ತಿಲ್ಲ. ಸಾರ್ವಜನಿಕರಿಂದ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಿನ ಅವ್ಯವಸ್ಥೆ ಗಮನಿಸಿದ್ದೇನೆ. ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬಿ ಬಂದಿದ್ದೇನೆ. ಇಲ್ಲಿನ ವ್ಯವಸ್ಥೆಯ ಬಗ್ಗೆ ಯಾವ ರೀತಿ ವರ್ಣಿಸಬೇಕೆಂದು ತಿಳಿಯುತ್ತಿಲ್ಲ ಎಂದು ಪರೋಕ್ಷವಾಗಿ ಬಿಮ್ಸ್ ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಐಸಿಯು, ಕೋವಿಡ್ ನಾರ್ಮಲ್ ವಾಡ್೯ಗಳನ್ನು ಪರಿಶೀಲನೆ ಮಾಡಿದ್ದೇನೆ. ಬಿಮ್ಸ್ ಆಡಳಿತ ಮಂಡಳಿಯದ್ದು ಚರ್ಮ ದಪ್ಪಗಿದೆ. ಈಗಾಗಲೇ ಒಂದು ಬಾರಿ ಖಾರವಾಗಿಯೇ ಎಚ್ಚರಿಕೆ ನೀಡಿದ್ದೆ. ಸಿಎಂ ವಿಡಿಯೋ ಕಾನ್ಫರೆನ್ಸ್ ಮುಗಿದ ಮೇಲೆ ಬಿಮ್ಸ್ ಅಧಿಕಾರಿಗಳ ಜತೆ ಸಭೆ ನಡೆಸಿ, ಆಮೇಲೆ ಹೇಳುತ್ತೇನೆ ಎಂದು ಬಿಮ್ಸ್ ನಡುವಳಿಕೆಯ ಬಗ್ಗೆ ತಮ್ಮದೇಯಾದ ಶೈಲಿಯಲ್ಲಿ ಚಾಟಿ ಬೀಸಿದರು.
ಓದಿ: Rape case: ಬಾಂಗ್ಲಾ ಸಂತ್ರಸ್ತ ಯುವತಿಯ ಹೇಳಿಕೆ ಪಡೆಯಲು ಸಿದ್ಧತೆ... ಅಸಲಿಗೆ ಯಾರು ಈಕೆ, ನಡೆದಿದ್ದೇನು?