ಬೆಳಗಾವಿ: ಇಲ್ಲಿನ ಕೋವಿಡ್ ವಾರ್ಡ್ನಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಕೊರೊನಾ ಸೋಂಕಿತರು ಇಂದು ಪ್ರತಿಭಟನೆ ನಡೆಸಿದರು.
ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಕೋವಿಡ್ ವಾರ್ಡ್‌ನಲ್ಲಿ ಅವ್ಯವಸ್ಥೆಗಳಿವೆ ಎಂದು ಸೋಂಕಿತರು ಆರೋಪಿಸಿದ್ದಾರೆ. ಊಟ ಹಾಗೂ ಬೆಡ್ ವ್ಯವಸ್ಥೆ ಸರಿ ಇಲ್ಲವೆಂದು 10ಕ್ಕೂ ಅಧಿಕ ಸೋಂಕಿತರು ಧರಣಿ ನಡೆಸಿದ್ದಾರೆ. 6 ದಿನಗಳಿಂದ ಕೊರೊನಾ ವರದಿಗಾಗಿ ಸೋಂಕಿತರು ಕಾಯುತ್ತಿದ್ದಾರೆ. 2ನೇ ವರದಿ ನಿರೀಕ್ಷೆಯಲ್ಲಿ 20ಕ್ಕೂ ಹೆಚ್ಚು ಸೋಂಕಿತರಿದ್ದಾರೆ. 3 ದಿನಗಳಲ್ಲಿ ಬರಬೇಕಿದ್ದ 2ನೇ ವರದಿ 6 ದಿನ ಕಳೆದರೂ ಬಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ಕೂಡ ಸೋಂಕಿತರು ಸೇವಿಸುವ ಉಪಹಾರದಲ್ಲಿ ಇರುವೆ, ಜಿರಳೆಗಳು ಕಂಡು ಬಂದಿದ್ದವು. ಈ ಅವ್ಯವಸ್ಥೆ ಸರಿಪಡಿಸಿ ಗುಣಮಟ್ಟದ ಆಹಾರ ನೀಡುವಂತೆ ಸೋಂಕಿತರು ಆಗ್ರಹಿಸಿದ್ದಾರೆ.