ಬೆಳಗಾವಿ: ಬೊಮ್ಮಾಯಿಯವರೇ ಕೇಶವ ಕೃಪಾ ಮಾತು ಕೇಳಬೇಡಿ. ಬಸವಣ್ಣನ ತತ್ತ್ವವನ್ನು ಅನುಸರಿಸಿ. ಆಗ ಜನರ ಹೃದಯ ಸಿಂಹಾಸನದಲ್ಲಿ ಜಾಗ ಸಿಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ತಿಳಿಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಲಕ ಲವ್ ಜಿಹಾದ್, ಮತಾಂತರ ನಿಷೇಧ ಮಸೂದೆ ಪಾಸ್ ಮಾಡಿಸಿಕೊಂಡು ಮತ್ತೆ ಮನೆಗೆ ಕಳುಹಿಸುತ್ತಾರೆ ಎಂದು ಟೀಕಿಸಿದರು.
ಯಡಿಯೂರಪ್ಪ ಸಿಎಂ ಆದಾಗ ಡಿಸೆಂಬರ್ಗೆ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂದು ನಾನು ಹೇಳಿದ್ದೆ. ಬೊಮ್ಮಾಯಿ ಸಿಎಂ ಆದಾಗ ಜನವರಿಯಲ್ಲಿ ಹೋಗ್ತಾರೆ ಅಂತಾ ಹೇಳಿದ್ದೆ. ನಮ್ಮ ಭವಿಷ್ಯ ವಾಣಿ ಯಾವತ್ತಿಗೂ ಸುಳ್ಳಾಗಲ್ಲ. ಈಗಾಗಲೇ ಮೇಲ್ನೋಟಕ್ಕೆ ಎರಡ್ಮೂರು ಹೆಸರು ಬಂದಿದೆ. ಬಿಜೆಪಿ ಮುಳುಗುತ್ತಿರುವ ಹಡಗು ಎಂದು ಇಬ್ರಾಹಿಂ ಟೀಕಿಸಿದರು.
ಇದನ್ನೂ ಓದಿ: ಮತಾಂತರದ ವಿಧೇಯಕದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ನೈತಿಕತೆ ಉಳಿಸಿಕೊಂಡಿಲ್ಲ: ಹೆಚ್ಡಿಕೆ ವಾಗ್ದಾಳಿ