ETV Bharat / city

ಹಳೆಯ ವಿಚಾರ ಮೆಲುಕು ಹಾಕಿದ ಲಕ್ಷ್ಮಣ ಸವದಿ.. ವೇದಿಕೆಯಲ್ಲಿ ಭಾವುಕರಾದ ಸಚಿವ ಸಿ.ಸಿ ಪಾಟೀಲ್ - ಬೆಳಗಾವಿ ಜಿಲ್ಲೆಯ ಅಥಣಿ

ಸಿ.ಸಿ ಪಾಟೀಲ್​ ನನ್ನ ರಾಜಕೀಯ ಏರಿಳಿತದ ಪ್ರತಿಯೊಂದು ಹಂತದಲ್ಲಿ ನನ್ನ ಬೆನ್ನೆಲುಬಾಗಿದ್ದವರು ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಹಳೆಯ ವಿಚಾರ ಮೆಲುಕು ಹಾಕುತ್ತಿರುವಾಗ ಸಚಿವ ಸಿ.ಸಿ ಪಾಟೀಲ್​​ ಭಾವುಕರಾದರು.

CC Patil gets emotional hearing Lakshman Savadi words
ವೇದಿಕೆಯಲ್ಲಿ ಭಾವುಕರಾದ ಸಚಿವ ಸಿಸಿ ಪಾಟೀಲ್ ಹಾಗೂ ಲಕ್ಷ್ಮಣ ಸವದಿ
author img

By

Published : Aug 17, 2022, 9:41 AM IST

ಅಥಣಿ: ರಾಜಕೀಯ ಜೀವನದಲ್ಲಿ ಸಿ.ಸಿ ಪಾಟೀಲ್​ ಅವರು ನನಗೆ ಸ್ವಂತ ಸಹೋದರನಿಗಿಂತ ಹೆಚ್ಚು ಮಾರ್ಗದರ್ಶನ ಮಾಡಿದ್ದಾರೆ. ನನ್ನ ರಾಜಕೀಯ ಏರಿಳಿತದ ಪ್ರತಿಯೊಂದು ಹಂತದಲ್ಲೂ ನನ್ನ ಬೆನ್ನೆಲುಬಾಗಿದ್ದವರು ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಈ ವೇಳೆ ಸಚಿವ ಸಿ.ಸಿ ಪಾಟೀಲ್​​ ಕಣ್ಣೀರು ಹಾಕಿದ ಪ್ರಸಂಗವೂ ಜರುಗಿತು.

ವೇದಿಕೆಯಲ್ಲಿ ಭಾವುಕರಾದ ಸಚಿವ ಸಿಸಿ ಪಾಟೀಲ್ ಹಾಗೂ ಲಕ್ಷ್ಮಣ ಸವದಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಜರುಗಿದ ನಿಪ್ಪಾಣಿ ಕೊಟ್ಟಲಗಿ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ವೇದಿಕೆ ಕಾರ್ಯಕ್ರಮದಲ್ಲಿ ಲಕ್ಷ್ಮಣ ಸವದಿ ಅವರು ಕಾರ್ಯಕ್ರಮದ ಉದ್ದಕ್ಕೂ ಭಾವನಾತ್ಮಕ ಭಾಷಣ ಮಾಡುತ್ತಾ ತಮಗೂ ಸಿ.ಸಿ ಪಾಟೀಲ್​​ ಅವರಿಗೂ ಇರುವ ಸಂಬಂಧಗಳ ಬಗ್ಗೆ ಸಾರ್ವಜನಿಕರ ಗಮನಕ್ಕೆ ತಂದರು. ಈ ವೇಳೆ ಸಿ.ಸಿ ಪಾಟೀಲ್​​ ​​ ಭಾವುಕರಾದರು. ಅವರನ್ನು ನೋಡಿ ಸವದಿ ಕೂಡ ಕಣ್ಣೀರು ಹಾಕಿ ನೆರೆದ ಪ್ರೇಕ್ಷಕರನ್ನು ಭಾವಪರವಶವಾಗಿಸಿದರು.

ಸವದಿ ಅವರ ಭಾಷಣದ ವೇಳೆ ಅಭಿಮಾನಿಯೊಬ್ಬ ಕರ್ನಾಟಕ ಹುಲಿ ಎಂದು ಘೋಷಣೆ ಕೂಗಿದರು. 'ಏ ಸುಮ್ಮನಿರು', ಹುಲಿ ಹಳೆಯದಾಗಿದ್ದು, ಉಗುರು ಹೋಗಿದೆ ಎಂದರು. ಈ ಮೂಲಕ ಕಳೆದ ಚುನಾವಣೆಯಲ್ಲಿ ಪರಾಭವಗೊಂಡ ಘಟನೆಯನ್ನು ಸವದಿ ಮೆಲುಕು ಹಾಕಿದರು.

ಇದನ್ನೂ ಓದಿ: ಸಿದ್ದರಾಮಯ್ಯ ವೋಟಿಗಾಗಿ ಸಾವರ್ಕರ್​ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ: ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.