ಬೆಳಗಾವಿ: ರಾಜ್ಯೋತ್ಸವವನ್ನ ಬಹಿಷ್ಕರಿಸಿ, ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಕರಾಳ ದಿನಾಚರಣೆ ಮೆರವಣಿಗೆ ನಡೆಸಿದರು.
ಮಾಜಿ ಶಾಸಕ ಮನೋಹರ ಕಿಣೇಕರ್, ಎಂಇಎಸ್ ನಗರಾಧ್ಯಕ್ಷ ದೀಪಕ್ ದಳವಿ ನೇತೃತ್ವದಲ್ಲಿ ರ‍್ಯಾಲಿ ನಡೆಸಲಾಗ್ತಿದೆ. ಬೆಳಗಾವಿಯ ಸಂಭಾಜಿ ವೃತ್ತದಿಂದ ಆರಂಭವಾಗಿರುವ ರ್ಯಾಲಿ ಬಸವೇಶ್ವರ ಸರ್ಕಲ್ಗೆ ಸಮಾಪ್ತಿಯಾಗಲಿದೆ.
ಮೆರವಣಿಗೆಯಲ್ಲಿ ವ್ಯಂಗ್ಯ ಚಿತ್ರ ಪ್ರದರ್ಶನ
ಮೆರವಣಿಗೆಯಲ್ಲಿ ಕರ್ನಾಟಕ ಸರ್ಕಾರವನ್ನು ದುಶ್ಯಾಸನಿಗೆ ಹೋಲಿಸಿದ ವ್ಯಂಗ್ಯ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಇದರಲ್ಲಿ ಕರ್ನಾಟಕ ಸರ್ಕಾರ ಮರಾಠಿ ಭಾಷಿಗರ ಮಾನಹರಣ ಮಾಡಿದ ಚಿತ್ರವಿದೆ.