ETV Bharat / city

ಲಾಕ್​ಡೌನ್​ಗೂ ಡೋಂಟ್​​ಕೇರ್​​: ಬೈಕ್​ ವಶಕ್ಕೆ ಪಡೆಯುತ್ತಿರುವ ಪೊಲೀಸರು - ಲಾಕ್​​ಡೌನ್​ ಆದೇಶ ಉಲ್ಲಂಘನೆ

ಪೊಲೀಸರು ಅನಗತ್ಯವಾಗಿ ಮನೆಯಿಂದ ಹೊರಗೆ ಬರುತ್ತಿರುವ ಬೈಕ್​​ಗಳನ್ನ ಸೀಜ್ ಮಾಡಲಾಗುತ್ತಿದ್ದು, 20 ಕ್ಕೂ ಹೆಚ್ಚು ಜನರ ಬೈಕ್ ಸೀಜ್. ಹುಕ್ಕೇರಿ ಪಟ್ಟಣದಲ್ಲಿ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು

bike seize
ಬೈಕ್ ಸೀಜ್
author img

By

Published : Mar 28, 2020, 9:04 PM IST

ಚಿಕ್ಕೋಡಿ: ಕೊರೊನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಲಾಕ್​ಡೌನ್​ ಜಾರಿಗೆ ತಂದಿದ್ದರೂ ಜನ ಡೋಂಟ್​ಕೇರ್​ ಎನ್ನುತ್ತಿದ್ದಾರೆ. ಮನೆ ಬಿಟ್ಟು ಹೊರ ಬಂದರೆ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. ಆದರೂ ಜನ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ, ಮಾತುಕೇಳದ ಜನರಿಗೆ ಬುದ್ಧಿ ಕಲಿಸಲು ರಾಜ್ಯ ಪೊಲೀಸರು ಮುಂದಾಗಿದ್ದಾರೆ.

ಅನಗತ್ಯವಾಗಿ ರಸ್ತೆಗಿಳಿಯುತ್ತಿರುವ ಜನರ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಪಿಎಸ್​​​​ಐ ಶಿವಾನಂದ ಗುಡಗನಟ್ಟಿ ಅವರು ಹುಕ್ಕೇರಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬೈಕ್​​ಗಳನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು

ಜನರ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನೆ ದಿನೇ ಅಪಾರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಹೀಗಾಗಿ ಅದನ್ನು ನಿಯಂತ್ರಿಸಲು ಲಾಕ್​ಡೌನ್​ ಮಾಡಲಾಗಿದೆ. ಆದರೂ ಜನರು ಓಡಾಡುವುದನ್ನು ನಿಲ್ಲಿಸಲಿಲ್ಲ. ಹೀಗಾಗಿ ಬೈಕ್​ ಜಪ್ತಿ ಮಾಡುತ್ತಿದ್ದಾರೆ. ಹುಕ್ಕೇರಿಯಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಬೈಕ್​​ಗಳನ್ನು ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.