ETV Bharat / city

ಸ್ಮಗ್ಲಿಂಗ್ ಆಗುತ್ತಿದ್ದ ಚಿನ್ನದ ಮೇಲೆ ಖಾಕಿ ಕನ್ನ?: ರಾತ್ರೋರಾತ್ರಿ ಬೆಳಗಾವಿ ಪೊಲೀಸ್ ಅಧಿಕಾರಿಗಳ ಎತ್ತಂಗಡಿ!

ಕಳ್ಳಸಾಗಣೆ ಮಾಡುತ್ತಿದ್ದ ಕಾರನ್ನು ವಶಕ್ಕೆ ಪಡೆದು, ಅದರಲ್ಲಿದ್ದ 2.5 ಕೋಟಿ ಮೌಲ್ಯದ ಚಿನ್ನವನ್ನು ಎಗರಿಸಿದ ಆರೋಪದಡಿ ಬೆಳಗಾವಿಯ ಮೂವರು ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.

Belgaum police officers transferred on the charge of looting smuggling gold
ಸ್ಮಗ್ಲಿಂಗ್ ಆಗುತ್ತಿದ್ದ ಚಿನ್ನದ ಮೇಲೆ ಖಾಕಿ ಕನ್ನ?: ರಾತ್ರೋರಾತ್ರಿ ಬೆಳಗಾವಿ ಪೊಲೀಸ್ ಅಧಿಕಾರಿಗಳ ಎತ್ತಂಗಡಿ!
author img

By

Published : May 21, 2021, 2:18 PM IST

Updated : May 21, 2021, 3:25 PM IST

ಬೆಳಗಾವಿ: ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನೇ ಕದ್ದಿರುವ ಗಂಭೀರ ಆರೋಪಕ್ಕೆ ಬೆಳಗಾವಿಯ ಪೊಲೀಸ್ ಅಧಿಕಾರಿಗಳು ಗುರಿಯಾಗಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ರಾತ್ರೋರಾತ್ರಿ ಸರ್ಕಾರ ವರ್ಗಾವಣೆ ಮಾಡಿದೆ.

ಏನಿದು ಪ್ರಕರಣ?

ಜನವರಿ 9 ರಂದು ಬೆಳಗಾವಿ ಮಾರ್ಗವಾಗಿ ಮಂಗಳೂರಿನಿಂದ ಮುಂಬೈಗೆ ಅಕ್ರಮವಾಗಿ ಚಿನ್ನ ಸಾಗಿಸಲಾಗುತ್ತಿತ್ತು. ಈ ಮಾಹಿತಿ ಹಿರಿಯ ಪೊಲೀಸ್ ಅಧಿಕಾರಿಗೆ ಸಿಕ್ಕಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಯಮಕನಮರಡಿ ಠಾಣೆ ಪಿಎಸ್ಐ ರಮೇಶ್ ಪಾಟೀಲ ನೇತೃತ್ವದ ತಂಡಕ್ಕೆ ಸೂಚಿಸಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಯಮಕನಮರಡಿ ಪೊಲೀಸರು ವಾಹನ ಪರಿಶೀಲಿಸಿದ್ದಾರೆ. ವಾಹನದಲ್ಲಿ ಚಿನ್ನ ಸಿಗದಿದ್ದಾಗ ವಾಹನ ವಶಕ್ಕೆ ಪಡೆದು ಠಾಣೆಗೆ ಒಯ್ದಿದ್ದಾರೆ. ಈ ಪ್ರಕರಣ ಇಷ್ಟಕ್ಕೆ ಮುಗಿಯದೇ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡಿದೆ.

ಸ್ಮಗ್ಲಿಂಗ್ ಆಗುತ್ತಿದ್ದ ಚಿನ್ನದ ಮೇಲೆ ಖಾಕಿ ಕನ್ನ?: ರಾತ್ರೋರಾತ್ರಿ ಬೆಳಗಾವಿ ಪೊಲೀಸ್ ಅಧಿಕಾರಿಗಳ ಎತ್ತಂಗಡಿ!
sdಸ್ಮಗ್ಲಿಂಗ್ ಆಗುತ್ತಿದ್ದ ಚಿನ್ನದ ಮೇಲೆ ಖಾಕಿ ಕನ್ನ?: ರಾತ್ರೋರಾತ್ರಿ ಬೆಳಗಾವಿ ಪೊಲೀಸ್ ಅಧಿಕಾರಿಗಳ ಎತ್ತಂಗಡಿ!

ಕಾರು ಬಿಡಿಸಲು ಲಕ್ಷ ಲಕ್ಷ ಡಿಮ್ಯಾಂಡ್

ಕಳ್ಳಸಾಗಣೆ ಮಾಡುತ್ತಿದ್ದ ಈ ವಾಹನ ಮಂಗಳೂರು ಮೂಲದ ತಿಲಕ್​​ ಪೂಜಾರಿ ಎಂಬುವವರಿಗೆ ಸೇರಿದೆ‌. ಈತ ಹುಬ್ಬಳ್ಳಿಯ ತನ್ನ ಸ್ನೇಹಿತ ಕಿರಣ್ ವೀರಣಗೌಡರ ಎಂಬುವವರಿಗೆ ಕಾರು ಬಿಡಿಸಿಕೊಡುವಂತೆ ಕೋರಿದ್ದಾನೆ. ಕಾರು ಬಿಡಿಸಿಕೊಡಲು ಕಿರಣ್ 60 ಲಕ್ಷ ‌ರೂ. ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಕೊನೆಗೆ ಈ ಡೀಲ್ 30 ಲಕ್ಷಗೆ ಫೈನಲ್‌ ಆಗಿದ್ದು ಕಿರಣ್​ಗೆ ತಿಲಕ್​ 25 ಲಕ್ಷ ರೂ. ಮುಂಗಡ ಹಣ ನೀಡಿದ್ದಾನೆ. ಬಳಿಕ ಕಿರಣ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಫೋನ್ ಮಾಡಿ ಸೀಜ್ ಆದ ಕಾರು ಬಿಡಿಸಿಕೊಡುವಂತೆ ಮನವಿ ಮಾಡಿದ್ದಾರೆ. ಆಗ ಅವರು ಯಮಕನಮರಡಿ ಠಾಣೆಗೆ ಕರೆಮಾಡಿ ಕಾರು ಬಿಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಪ್ರಕರಣ ದಾಖಲಾಗಿದ್ದರಿಂದ ಕಾರನ್ನು ಕೋರ್ಟ್ ನಿಂದ ಬಿಡಿಸಿಕೊಳ್ಳಬೇಕು ಎಂದು ಯಮಕನಮರಡಿ ಪಿಎಸ್ಐ ರಮೇಶ ಪಾಟೀಲ್ ಹೇಳಿದ್ದಾರೆ.

ಕಾರಿನ ಏರ್​​ಬ್ಯಾಗ್​​ನಲ್ಲಿತ್ತಂತೆ ಎರಡೂವರೆ ಕೋಟಿ ಮೌಲ್ಯದ ಚಿನ್ನ

ಆ ಕಾರಿನ ಏರ್​​ಬ್ಯಾಗ್​​ನಲ್ಲಿ 2.5 ಕೋಟಿ ಮೌಲ್ಯದ 4 ಕೆಜಿ 900 ಗ್ರಾಂ ಚಿನ್ನ ಅಡಗಿಸಿ ಇಡಲಾಗಿತ್ತು ಎನ್ನಲಾಗುತ್ತಿದೆ. ಆಗ ಮಿಡಿಯೇಟರ್ ಕಿರಣ್ ಹಾಗೂ ಪೊಲೀಸರು ಸೇರಿ ಚಿನ್ನ ಲಪಟಾಯಿಸಿ ಹುಬ್ಬಳ್ಳಿಯ ಚಿನ್ನದ ವ್ಯಾಪಾರಿಯೊಬ್ಬರಿಗೆ ಮಾರಿ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 2021ರ ಏಪ್ರಿಲ್ 16 ರಂದು ಕಾರು ಮಾಲೀಕ ತಿಲಕ್ ಪೂಜಾರಿ ಕೋರ್ಟ್ ಗೆ ದಂಡ ತುಂಬಿ ಕಾರು ಬಿಡಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ 2.5 ಕೋಟಿ ಬೆಲೆ ಬಾಳುವ ಚಿನ್ನ ಮಾಯವಾಗಿದನ್ನು ಗಮನಿಸಿದ ತಿಲಕ್​ ಕೂಡಲೇ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಹಿರಿಯ ಅಧಿಕಾರಿಗಳಿಂದ ತನಿಖೆ

ಕಾರಿನಲ್ಲಿದ್ದ ಚಿನ್ನ ಮಾಯವಾಗಿರುವ ಬಗ್ಗೆ ದೂರು ದಾಖಲಾದ ನಂತರ ಉತ್ತರ ವಲಯ ಐಜಿಪಿ ಹಿರಿಯ ಅಧಿಕಾರಿಗೆ ತನಿಖೆಗೆ ಸೂಚಿಸಿದ್ದರು. ತನಿಖೆ ಚುರುಕುಗೊಳಿಸಿದಾಗ ಇದರ ಹಿಂದೆ ಕಿರಣ್ ಹಾಗೂ ಡಿವೈಎಸ್​ಪಿ ಜಾವೇದ ಇನಾಂದಾರ ಹಾಗೂ ಪಿಎಸ್ಐ ರಮೇಶ ಪಾಟೀಲ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು ಪ್ರಸ್ತುತ ಈ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರಗೊಂಡಿದೆ.

ಗೋಕಾಕ್ ಡಿವೈಎಸ್​ಪಿ ಜಾವೇದ್​ ಸೇರಿ ರಾತ್ರೋರಾತ್ರಿ ಹಲವರ ವರ್ಗಾವಣೆ

ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಗೃಹ ಇಲಾಖೆ, ತಕ್ಷಣವೇ ಗೋಕಾಕ್ ಡಿವೈಎಸ್​ಪಿ ಜಾವೇದ್​​ ಇನಾಂದಾರ ಅವರಿಗೆ ಐ.ಎಸ್.ಡಿ ಗೆ ವರ್ಗಾವಣೆ ಮಾಡಿದೆ. ಸಿಪಿಐ ಗುರುರಾಜ ಕಲ್ಯಾಣಶೆಟ್ಟಿಗೆ ಪಿ.ಟಿ.ಎಸ್. ಹುಬ್ಬಳ್ಳಿ-ಧಾರವಾಡ, ಮತ್ತು ಪಿಎಸ್ಐ ರಮೇಶ ಪಾಟೀಲ್ ಅವರಿಗೆ ಸಿ.ಎನ್.ಎ ಪೊಲೀಸ್ ಠಾಣೆ ಹುಬ್ಬಳ್ಳಿ - ಧಾರವಾಡಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

Last Updated : May 21, 2021, 3:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.