ETV Bharat / city

ಹೆಚ್ಐವಿಗೆ ತುತ್ತಾಗಿದ್ರೂ ಸಾವಿನ ಭಯ ಬದಿಗಿಟ್ಟು ಬದುಕಿದ ಬೆಳಗಾವಿ ಮಹಿಳೆ - ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ನಾಗರತ್ನಾ ರಾಮಗೌಡ ಎಂಬ ಬೆಳಗಾವಿ ಮೂಲದ ಮಹಿಳೆ ತನಗೆ ಹೆಚ್‌ಐವಿ ಸೋಂಕು ತಗುಲಿದ್ದರೂ ಎದೆಗುಂದದೆ ಕಳೆದ 25 ವರ್ಷಗಳಿಂದ ಜನರಿಗೆ ಅರಿವು ಮೂಡಿಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ.

Belgavi woman who despite being infected with HIV, no fears of death
ಹೆಚ್ಐವಿ ಸೋಂಕಿಗೆ ತುತ್ತಾಗಿದ್ದರೂ ಸಾವಿನ ಭಯ ಬದಿಗಿಟ್ಟು ಬದುಕಿದ ಬೆಳಗಾವಿ ಮಹಿಳೆ..
author img

By

Published : Mar 8, 2022, 2:48 PM IST

Updated : Mar 8, 2022, 4:04 PM IST

ಬೆಳಗಾವಿ: ಬೆಳಗಾವಿ ಪಟ್ಟಣದ ನಾಗರತ್ನಾ ರಾಮಗೌಡ ಎಂಬವರು ಹೆಚ್‌ಐವಿ ರೋಗವನ್ನು ಮೆಟ್ಟಿ ನಿಂತು 25 ವರ್ಷಗಳಿಂದ ಎಲ್ಲರಂತೆ ಆರೋಗ್ಯವಾಗಿದ್ದು, ಹೆಚ್ಐವಿ-ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇವರ ಈ ಧೈರ್ಯ, ಆತ್ಮವಿಶ್ವಾಸ ಹಾಗು ಅದಮ್ಯ ಛಲದ ಬದುಕನ್ನು ಮೆಚ್ಚಿ ಹತ್ತಾರು ಸಂಘಟನೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ನಾಗರತ್ನಾ ಅವರಿಗೆ 1997ರಲ್ಲಿ ಸುನೀಲ ರಾಮಗೌಡ ಎಂಬವರೊಂದಿಗೆ ವಿವಾಹವಾಗಿತ್ತು. ಆಗಿನ್ನೂ ಅವರಿಗೆ 17 ವರ್ಷ ಪ್ರಾಯ. ಮದುವೆಯಾದ 5 ತಿಂಗಳ ಬಳಿಕ ವೈದ್ಯರೊಬ್ಬನ್ನು ಭೇಟಿ ಮಾಡಿದಾಗ ಹೆಚ್‌ಐವಿ ಪಾಸಿವಿಟ್‌ ಇರುವುದು ಗೊತ್ತಾಗಿದೆ. ವೈದ್ಯರು ಕೇವಲ 3 ತಿಂಗಳು ಬದುಕುವ ಬಗ್ಗೆ ಹೇಳಿದ್ದರಂತೆ. ಅದೇ ವೇಳೆಗೆ ನಾಗರತ್ನಾ ಗರ್ಭಿಣಿಯೂ ಆಗಿದ್ದರು.

ಇಂಥ ಸಂದರ್ಭದಲ್ಲಿ ಕೆಲವರಂತೂ ಗರ್ಭಪಾತ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಪತಿಯಿಂದ ನಾಗರತ್ನಾ ಅವರಿಗೆ ಹೆಚ್ಐವಿ ಸೋಂಕು ತಗುಲಿದ್ದು, ಇದರಿಂದ ಇವರು ಭಾರಿ ಆಘಾತವನ್ನೇ ಅನುಭವಿಸಿದರು. ವೈದ್ಯರು ಹೇಳಿದ ವಿಚಾರ ತಿಳಿದ ಹಲವು ದಿನಗಳ ಕಾಲ ಮನೆಯಿಂದ ಹೊರಬಂದಿರಲಿಲ್ಲ. ನಮಗಿದ್ದ ರೋಗದ ಬಗ್ಗೆ ಇಬ್ಬರೂ ಕುಟುಂಬದವರಿಗಾಗಲಿ, ಬೇರೆಯವರಿಗಾಗಲಿ ಹೇಳಿಕೊಂಡಿರಲಿಲ್ಲ. ಆದರೆ, ಕೆಲದಿನಗಳ ನಂತರ ಎಲ್ಲರಿಗೂ ವಿಚಾರ ಗೊತ್ತಾಗುತ್ತದೆ. ಈ ಸಂದರ್ಭದಲ್ಲಂತಲೂ ಮತ್ತಷ್ಟು ತೊಂದರೆ ಅನುಭವಿಸಬೇಕಾಯಿತು ಎಂದರು.

ಜನರಿಗೆ ಅರಿವು: ಸಮಾಜದಲ್ಲಿ ಎಲ್ಲರೂ ತನ್ನನ್ನು ಕೀಳಾಗಿ ನೋಡುತ್ತಿದ್ದರು. ಆದರೆ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವಿನ ಸಲುವಾಗಿ ಬದುಕು ಅನಿವಾರ್ಯವಾಗಿತ್ತು. ಹಾಗಾಗಿಯೇ ಮಗು ಹುಟ್ಟಿದ‌ ನಂತರ 18 ತಿಂಗಳುಗಳ ಕಾಲ ಕೈಯಲ್ಲಿ ಜೀವ ಹಿಡಿದು ಬದುಕಿದೆ. ಕೆಲ ತಿಂಗಳ ಬಳಿಕ ‌(ಹೆಚ್‌ಐವಿ ನೆಗೆಟಿವ್‌) ಮಗುವಾಯಿತು. ಮಗುವಾದ ನಂತರ ಹೆಚ್ಐವಿ ಭಯ ದೂರವಾಯಿತು ಎಂದು ಅವರು ವಿವರಿಸುತ್ತಾರೆ.

ತಾನು ಮೂರು ತಿಂಗಳು ಜೀವಂತವಾಗಿ ಇರುವುದಿಲ್ಲ ಎಂದು ಹೇಳಿದವರ ಮುಂದೆಯೇ 25 ವರ್ಷಗಳ ಜೀವನ ಕಳೆದು ಈಗಲೂ ಎಲ್ಲರಂತೆ ಆರೋಗ್ಯವಾಗಿದ್ದಾರೆ. ನಂತರ ಹೆಚ್ಐವಿ-ಏಡ್ಸ್ ಬಗ್ಗೆ ಜನರಿಗೆ ಅರಿವು ಮೂಡಿಸಲು ನಿರ್ಧಾರ ಮಾಡಿದ ನಾಗರತ್ನ ಇಂದಿಗೂ ತಮ್ಮ ಸಾಮಾಜಿಕ ಕೆಲಸ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬಂಜೆತನ ನಿವಾರಣೆಗೆ ನಾಟಿತಜ್ಞೆಯ ಟ್ರೀಟ್​​​​​​ಮೆಂಟ್​.. ಮಕ್ಕಳಾಗದವರಿಗೆ ಮಕ್ಕಳ ಭಾಗ್ಯಕಲ್ಪಿಸುವ ಲಕ್ಷ್ಮಮ್ಮ

Last Updated : Mar 8, 2022, 4:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.