ಬೆಳಗಾವಿ: ನನ್ನ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಮಧ್ಯೆ ಸಮನ್ವಯದ ಕೊರತೆ ಇದೆ ಎಂಬುದು ಶುದ್ಧ ಸುಳ್ಳು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೇ ದಿನ ನಾಲ್ಕು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ರೆ, ಮೂರು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ರು. ಈ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಶ್ರೀರಾಮುಲು, ನನಗೆ ಬಂದಿರುವ ಮಾಹಿತಿ ಪ್ರಕಾರ ಇಂದು ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸಚಿವ ಡಾ. ಕೆ.ಸುಧಾಕರ್‌ಗೆ ಲೇಟೆಸ್ಟ್ ಮಾಹಿತಿ ಸಿಕ್ಕಿರಬಹುದು.
ನಾನು ಜಿಲ್ಲಾ ಪ್ರವಾಸದಲ್ಲಿರುವ ಕಾರಣ ಇನ್ನೂ ಗೊತ್ತಾಗಿಲ್ಲ. ಸದ್ಯ ನನಗೆ ಬಂದ ಮಾಹಿತಿ ಪ್ರಕಾರ ಒಂದು ಗೌರಿಬಿದನೂರು, ಬೆಂಗಳೂರಿನ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದಲ್ಲದೇ ನನಗೆ ಬಂದ ಮಾಹಿತಿ ಪ್ರಕಾರ ಈವರೆಗೂ ರಾಜ್ಯದಲ್ಲಿ 18 ಕೊರೊನಾ ಕೇಸ್ ಪತ್ತೆಯಾಗಿದೆ. ಲೇಟೆಸ್ಟ್ ಮಾಹಿತಿ ಇಲ್ಲ. ಈ ಕುರಿತು ಸಚಿವ ಸುಧಾಕರ್ ಹಾಗೂ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು.
ಲೇಟೆಸ್ಟ್ ಅಪ್ಡೇಟ್ ಏನಿದೆ ಫೈಂಡ್ ಔಟ್ ಮಾಡಿಕೊಂಡು ಟ್ವೀಟ್ ಮಾಡಿ ಮಾಹಿತಿ ಕೊಡೊದಾಗಿ ತಿಳಿಸಿದ್ರು. ಸಚಿವ ಸುಧಾಕರ್ ಹಾಗೂ ನನ್ನ ಮಧ್ಯೆ ಸಮನ್ವಯದ ಕೊರತೆ ಇದೆ ಎಂಬುದು ಸುಳ್ಳು. ಬರುವಂತಹ ಎರಡು ವಾರ ಅವಧಿ ತುಂಬಾ ಕ್ರೂಷಿಯಲ್ ಇದೆ. ಪ್ರಧಾನಿ ಮೋದಿ ನಾಳೆ ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಎಲ್ಲರೂ ಸಹಕರಿಸಬೇಕು ಎಂದರು.